ಅಂಗನವಾಡಿ ಮಕ್ಕಳ ಶಿಕ್ಷಣದ ಜ್ಞಾನತಾಣದ -ಸಿಡಿಪಿಓ ನಾಗನಗೌಡ.

ಕೂಡ್ಲಿಗಿ.ನ.12 :- ಅಂಗನವಾಡಿ ಬಡಮಕ್ಕಳು ಗುಣಮಟ್ಟ ಕಲಿಕೆ ಹೆಚ್ಚಿಸಿಕೊಳ್ಳಲು ರಾಜ್ಯದಲ್ಲಿ ಪ್ರೋತ್ಸಾಹ ನೀಡುತ್ತಿದ್ದು ಇದರ ಸದುಪಯೋಗ ಪಡೆದು ಮೂರು ವರ್ಷದ ಬುದ್ದಿ ನೂರು ವರ್ಷದ ವರಗೆ ಆಗಾಗಿ ಮಕ್ಕಳಿಗೆ ಊಟ ಮತ್ತು ಅಂಗನವಾಡಿಯಲ್ಲಿ ಬರೆದಿರುವ ಗೋಡೆ ಬರಹದ ಚಿತ್ರಗಳ ಮೂಲಕ ಮಕ್ಕಳನ್ನು ಶಿಕ್ಷಣದ ಜ್ಞಾನ ತುಂಬುಲು ಅಂಗನವಾಡಿ ಕಾರ್ಯಾಕರ್ತೆ ಮತ್ತು ಸಹಾಯಕಿಯರ ಪಾತ್ರ ಅತೀ ಮುಖ್ಯವಾಗಿದ್ದು ಮಕ್ಕಳಿಗೆ ಅಂಗನವಾಡಿ ಜ್ಞಾನತಾಣವಾಗಿದೆ ಎಂದು ಸಿಡಿಪಿಓ ಎನ್. ಪಿ. ನಾಗನಗೌಡಪಾಟೇಲ್ ತಿಳಿಸಿದರು. ಅವರು ಪಟ್ಟಣದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಅತೀ ಹಿಂದುಳಿದ ಕೂಡ್ಲಿಗಿ ತಾಲೂಕಿನಲ್ಲಿ ಅನೇಕ ಬಡಕುಟುಂಬಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು ಗ್ರಾಮೀಣ ಬಾಗದ ಮಕ್ಕಳು ಸಹ ಆಧುನಿಕ ಯುಗದಲ್ಲಿ ನಗರ ಪಟ್ಟಣದ ಶಿಕ್ಷಣಕ್ಕೆ ಹತ್ತಿರವಾಗಲು ಅಂಗನವಾಡಿ ಕೇಂದ್ರಗಳು ಸಹಾಯಕವಾಗಿವೆ ಎಂದರು. ಕಾರ್ಯಕ್ರಮದಲ್ಲಿ ಸಹಾಯಕ ಶಿಶುಅಭಿವೃದ್ದಿ ಯೋಜನಾಧಿಕಾರಿ ಜಿ. ಇ. ಲಿಂಗರಾಜ್ ಹಿರಿಯ ಮೇಲ್ವಿಚಾರಕಿ ಮಹೇಶ್ವರಿ ಆಲೂಗರು. ಜಿಲ್ಲಾ ಸಂಪನ್ಮೂಲ ಅಧಿಕಾರಿಗಳಾದ ನಾಗೇಶ ಮತ್ತು ಕೂಡ್ಲಿಗಿ ತಾಲೂಕು ಅಂಗನವಾಡಿ ಕಾರ್ಯೆಕರ್ತೆಯರ ಸಂಘದ ಅಧ್ಯಕ್ಷರಾದ ಮಹಾಂತಮ್ಮ ಮತ್ತು ಇತರೆ ಕಾರ್ಯಕರ್ತೆಯರು ಉಪಸ್ಥಿತರಿದ್ದರು.