ಅಂಗನವಾಡಿ ಮಕ್ಕಳಿಗೆ ಹೂಗುಚ್ಛ ನೀಡಿ ಸ್ವಾಗತ

ಔರಾದ : ನ.11:ಮಹಾಮಾರಿ ಕೋರೋನಾ ಸಂಕಟದಿಂದ ಇಡೀ ದೇಶಾದ್ಯಂತ ಶಾಲಾ ಕಾಲೇಜುಗಳು ಮುಚ್ಚಿದ್ದವು. ಇದೀಗ ಬಹುತೇಕ ಶಾಲಾ ಕಾಲೇಜುಗಳು ಪ್ರಾರಂಭವಾಗಿವೆ. ನವೆಂಬರ ರಿಂದ ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳು ಪ್ರಾರಂಭಗೊಂಡಿವೆ.

ಸರಕಾರ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭ ಮಾಡಲು ಅನುಮತಿ ನೀಡಿದ ಹಿನ್ನಲೆಯಲ್ಲಿ ಪಟ್ಟಣ ಸೇರಿದಂತೆ ವಿವಿಧಡೆ ಅಂಗನವಾಡಿ ಕೇಂದ್ರಗಳು ಪ್ರಾರಂಭ ಮಾಡಲಾಗಿತು. ನಗರದ ಮೋಚಿಗಲ್ಲಿ
ಅಂಗನವಾಡಿ ಕೇಂದ್ರವು ಸಹಿತ ತಳಿರು ತೋರಣಗಳಿಂದ ಶೃಂಗಾರ ಮಾಡಲಾಗಿತು. ಅಂಗನವಾಡಿ ಕೇಂದ್ರಕ್ಕೆ ಬಂದ ಮಕ್ಕಳಿಗೆ ಶಿಕ್ಷಕಿ ಸುನೀತಾ ಅವರು ಪೂಷ್ಪ ಗುಚ್ಛ ನೀಡಿ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿ ಒಣಿಯ ನಿವಾಸಿಗಳು ಪಾಲಕರು ಸಹಾಯಕಿ ಶೋಭಾ ಸ್ವಾಮಿ ಸೇರಿದಂತೆ ಇತರರು ಇದ್ದರು.