ಅಂಗನವಾಡಿ ಮಕ್ಕಳಿಗೆ ವಾತ್ಸಲ್ಯ ತೋರಿಸಿ ಶಿಕ್ಷಣ ನೀಡಬೇಕು ; ಶಾಸಕ ಬಿ.ದೇವೇಂದ್ರಪ್ಪ

ಜಗಳೂರು.ಮೇ.೩೧; ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳನ್ನು ತಮ್ಮ ಮಕ್ಕಳೆಂದು ಭಾವಿಸಿ ಕಾರ್ಯಕರ್ತೆಯರು ವಾತ್ಸಲ್ಯ ತೊರಿಸಿ ಶಿಕ್ಷಣ ನೀಡಬೇಕು ಎಂದು ಶಾಸಕ ದೇವೇಂದ್ರಪ್ಪ ಹೇಳಿದರು.ಪಟ್ಟಣದ ಭುವನೇಶ್ವರ ವೃತ್ತದ ಸಮಿಪವಿರುವ ಅಂಗನವಾಡಿ ಕೇಂದ್ರದ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶದ ಪ್ರಥಮ ಪ್ರಧಾನ ಮಂತ್ರಿ ನೆಹರು ರವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.ರಾಷ್ಟ್ರಪತಿಯಾಗಿದ್ದ ಸರ್ವಪಲ್ಲಿ ರಾಧಕೃಷ್ಣ ಅವರ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತಿದೆ ಮದರ್ ತೇರೆಸಾ ಬೇರೆ ರಾಷ್ಟ್ರದಲ್ಲಿ   ಜನಿಸಿದಿರು ಸಹ ಭಾರತದಲ್ಲಿ ಅವರ ಸೇವೆಯನ್ನು ನೀಡಿದ್ದರು ಇವರ ಸೇವೆಯನ್ನು ಪರಿಗಣಿಸಿ ಸರಕಾರವು ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ನೆನೆಪಿನಲ್ಲಿ ಉಳಿಯುವಂತೆ ಆಚರಣೆ ಮಾಡುತ್ತಿದೆ ಈ ಸಾಧಕರಂತೆ ನೀವು ಸಾಧನೆಗೈಯ್ಯ ಬೇಕು ಎಂದರು.ಅoಗನವಾಡಿ ಕೇಂದ್ರದಲ್ಲಿ ಪುರುಷರಿಗೆ ಅವಕಾಶವಿಲ್ಲ ಮಹಿಳೆಯರಿಗೆ ನೀಡಿದ್ದಾರೆ ಕಾರಣ ಅವರಲ್ಲಿರುವ ತಾಯಿಗುಣ ವಿರುವುದರಿಂದ ಹಾಗಾಗಿ ನಿಮಗೆ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಮತ್ತು ಕೇಂದ್ರಕ್ಕೆ ಬರುವ ಮಕ್ಕಳನ್ನು ನಮ್ಮ ಮಕ್ಕಳೆಂದು ಭಾವಿಸಿಹಾರೈಕೆ ಮಾಡಬೇಕು ಎಂದರು.ನಾನು ಒಂದು ಶಿಕ್ಷಣ ಸಂಸ್ಥೆಯಲ್ಲಿ ಕಸಗುಡಿಸುವoತ ಜವಾನ ನಾಗಿ ನನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದೆ ಈಗ ದೇವರ ಕೃಪೆಯಿಂದ. ನಾನು ಶಾಸಕನಾಗಿದ್ದಾನೆ ಹಾಗೆಂದು ಕಸಹೊಡೆ ಯುವವರೆಲ್ಲ ಶಾಸಕರಾಗುವುದಿಲ್ಲ ಕಸ ಗುಡಿಸುವ ಕೆಲಸ ಮಾಡಿ ಅದು ನಿಷ್ಟೆಯಿಂದ ಮಾಡಬೇಕು ಆಗ ಪ್ರತಿಫಲ ದೊರೆಯಲಿದೆ ಎಂದುಹೇಳಿದರು.ಈ ಸಂಧರ್ಭ ದಲ್ಲಿ  ಕೆಪಿಸಿಸಿ ಎಸ್. ಟಿ ಘಟಕದ ರಾಜ್ಯಾಧ್ಯಕ್ಷ  ಕೆ.ಪಿ.ಪಾಲಯ್ಯ, ಜಗಳೂರು ಕ್ಷೇತ್ರದ ಉಸ್ತುವಾರಿಕಲ್ಲೇಶ್ ರಾಜ್ ಪಾಟೇಲ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷಷಂಷೀರ್, ಸಿಡಿಪಿಓ ಬಿರೇಂದ್ರ ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯರಾದ ಮಹಮದ್ ಆಲಿ, ರವಿಕುಮಾರ್,   ಕುಮಾರ್, ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ , ಮೆಲ್ವೀಚಾರಕಾರದ ಅನುರಾಧ, ಶಾಂತಮ್ಮ, ರೇಖಾ ನಾಡಿಗಾರ್ , ಪ್ಟಣದ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇoದ್ರದ ಕಾರ್ಯಕರ್ತೆಯರು ,ಸಹಾಯಕರು ಸೇರಿದಂತೆ ಮತ್ತಿತರರು ಹಾಜರಿದ್ದರು,