ಅಂಗನವಾಡಿ ಮಕ್ಕಳಿಗೆ ಔಷಧಿ ಕಿಟ್ ವಿತರಣೆ

ವಿಜಯಪುರ, ನ.12-ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದ ಅಂಗನವಾಡಿ ಶಾಲೆಯಲ್ಲಿ ಔಷÀಧಿ ಸೇವನೆ ಕುರಿತು ಹಾಗೂ ಮಕ್ಕಳ ಶುಚಿತ್ವದ ಕುರಿತು ಅರಿವನ್ನು ಮೂಡಿಸುವದರೊಂದಿಗೆ ಔಷಧಿ ಕಿಟ್ ವಿತರಿಸಲಾಯಿತು.
ಸರಕಾರವು ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡು ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಅಪೌಷ್ಠಿಕತೆ ಹೋಗಲಾಡಿಸಲು ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಧೃಢ ಮಕ್ಕಳು ರಾಷÀ್ಟ್ರದ ಸಂಪತ್ತು ಎಲ್ಲ ಮಕ್ಕಳು ಆರೋಗ್ಯ ವಾಗಿರಲು ಮೆಡಿಸಿನ್ ಕಿಟ್ ವಿತರಣೆ ಮಾಡಲಾಯಿತು.
ಕಿಟ್‍ಗಳಲ್ಲಿ 7 ಬಗೆಯ ಪೌಷ್ಠಿಕಾಂಶ ಹೊಂದಿದ್ದು ಸರಿಯಾಗಿ ಉಪಯೋಗಿಸಲು ಪಾಲಕರಿಗೆ ಆರೋಗ್ಯ ಕುರಿತು ತಿಳಿಹೇಳಲಾಯಿತು.
ಈ ಸಂದರ್ಭದಲ್ಲಿ ದೇವರ ನಿಂಬರಗಿ ವಲಯದ ಮೇಲ್ವಿಚಾರಕಿಯರಾದ ತೃಪ್ತಿ ಸಿ. ತಿಳಗುಳ , ಅಂಗನವಾಡಿ ಕಾರ್ಯಕರ್ತೆಯರಾದ ಜ್ಯೋತಿ ಸಿಂಗೆ, ಸಂಗೀತ ಹೋಕಳೆ, ಎಸ್.ಬಿ.ಬಿರಾದಾರ, ಸುನಂದಾ ಗಾಡಗೆ, ಸಂಗೀತ ಚಲವಾದಿ, ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.