ಅಂಗನವಾಡಿ ಪಕ್ಕದಲ್ಲಿದೆ ಹತ್ತು ಅಡಿ ಆಳದ ಗುಂಡಿ..!


ಶಿವಮೊಗ್ಗ, ನ. 8: ಸಾಗರ ನಗರಸಭೆ ವ್ಯಾಪ್ತಿಯ ಜನ್ನತ್ ನಗರದ ಮುಖ್ಯ ರಸ್ತೆಯಲ್ಲಿರುವ ಅಂಗನವಾಡಿ ಮುಂಭಾಗ ಹತ್ತು ಅಡಿ ಆಳದ ಗುಂಡಿ ತೆಗೆಯಲಾಗಿದ್ದು, ಮಕ್ಕಳಿಗೆ ಇದು ಅಪಾಯಕಾರಿಯಾಗಿ ಪರಿಣಮಿಸಿದೆ!ಕಳೆದ ಸೋಮವಾರದಿಂದ ಅಂಗನವಾಡಿಗಳು ತೆರೆದಿವೆ. ಆದರೆ ಈ ಗುಂಡಿಯ ಕಾರಣದಿಂದಾಗಿ ಪೋಷಕರು ಮಕ್ಕಳನ್ನು ಅಂಗನವಾಡಿಗೆ ಕಳಿಸಲು ಮನಸ್ಸು ಮಾಡುತ್ತಿಲ್ಲ. ಅಂಗನವಾಡಿಗೆ ಹೋಗುವ ಪಕ್ಕದಲ್ಲೇ ಈ ಗುಂಡಿ ಇದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಚರಂಡಿ ಕಾಮಗಾರಿಗೆ ಈ ಗುಂಡಿ ತೆಗೆದು ಎರಡು ತಿಂಗಳಾದರು ಇನ್ನೂ ಚರಂಡಿ ನಿರ್ಮಿಸಿಲ್ಲ‌. ನವಾಯತ್ ಕಾಲೋನಿ, ಜನ್ನತ್ ನಗರದ ರಸ್ತೆ ಸಂಪರ್ಕ ಬಂದ್ ಆಗಿದೆ ಎಂದು ಸ್ಥಳೀಯರು ದೂರಿದ್ದಾರೆ.ತಾವು ಕಳೆದ ಒಂದೂವರೆ ತಿಂಗಳಿಂದ ನಗರಸಭಾ ಅಧ್ಯಕ್ಷರಿಗೆ ಈ ಸಮಸ್ಯೆ ಕುರಿತು ಗಮನಕ್ಕೆ ತಂದಿರುವೆ. ಆದರೂ ಅಧ್ಯಕ್ಷರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲಾ.ಕ್ರಿಯಾ ಯೋಜನೆ ಮಾಡಿ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿರುವೆ ಎಂದು ಹೇಳುತ್ತಾ ಬಂದಿದ್ದಾರೆ. ಅಲ್ಲಿಯವರೆಗೆ ಈ ಮಕ್ಕಳು ಅಂಗನವಾಡಿಗೆ ಬರುವುದಾದರೂ ಹೇಗೆ? ಮಕ್ಕಳ ರಕ್ಷಣೆಯ ಹೊಣೆ ಹೊರುವವರು ಯಾರು?’ಎಂದು ಸ್ಥಳೀಯ ನಗರಸಭೆ ಸದಸ್ಯ ತಸ್ರೀಫ್ ಇಬ್ರಾಹಿಂ ಹೇಳಿದ್ದಾರೆ.