ಅಂಗನವಾಡಿ ನೌಕರರ ನೇಮಕ, ಸ್ಮಾಟ್೯ಕ್ಲಾಸ್ ನಿರ್ಮಾಣದಲ್ಲಿ ನಿರ್ಲಕ್ಷ್ಯೆ ಮಾಡಿದರೆ ಕಠಿಣ ಕ್ರಮ- ಡಿಸಿ ವೆಂಕಟೇಶ ಕುಮಾರ್

ರಾಯಚೂರು,ಡಿ.೩೧- ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ನೌಕರರು ಮತ್ತು ಸಹಾಯಕಿಯರ ನೇಮಕಾತಿ ವಿಳಂಬಕ್ಕೆ ಮತ್ತು ಡಿಎಂಎಫ್ ಅನುದಾನದಿಂದ ಸ್ಮಾಟ್೯ ಅಂಗನವಾಡಿ ಸ್ಥಾಪನೆ ಕುರಿತು ಸಿಡಿಪಿಒ ಜಿಲ್ಲಾ ಅಧಿಕಾರಿ ವೀರನಗೌಡ ಅವರನ್ನು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ತರಾಟೆಗೆ ತೆಗೆದುಕೊಂಡರು.
ಅವರಿಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಖಾಲಿಯಿರುವ ಅಂಗನವಾಡಿ ನೌಕರರ ಹುದ್ದೆಗಳ ಮಾಹಿತಿ ಪಡೆದು ಶೀಘ್ರದಲ್ಲೇ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅನಾವಶ್ಯಕವಾಗಿ ವಿಳಂಬ ಮಾಡಬಾರದು. ಡಿಎಂಎಫ್ ಅನುದಾನದಲ್ಲಿ ಸ್ಮಾಟ್೯ ಅಂಗನವಾಡಿ ನಿರ್ಮಾಣ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ತರಾಟೆಗೆ ತೆಗೆದುಕೊಂಡರು.
ಅಂಗನವಾಡಿ ಕೇಂದ್ರಗಳು ಕೇವಲ ನೆರಳು ನೀಡುವ ಕಟ್ಟಡಗಳಾಗದೆ ಮಕ್ಕಳ ಸಂಪೂರ್ಣ ಕಲಿಕಾ ಕೇಂದ್ರಗಳಾಗಬೇಕು. ಗೊಡೆಗಳಿಗೆ ಜಿಲ್ಲೆಯ ಇತಿಹಾಸ ಸಾರುವ ಚಿತ್ರಗಳು ಸೇರಿದಂತೆ ಇನ್ನಿತರೆ ವೈಶಿಷ್ಟ್ಯಗಳನ್ನು ಹೊಂದಿರಬೇಕು ಎಂದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳನ್ನು, ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿರುವ ಕಟ್ಟಡಗಳನ್ನು ಪೂರ್ಣಗೊಳಿಸಿ ವರ್ಗಾಯಿಸಬೇಕು ಎಂದರು.
ಹೊಸ ಅಂಗನವಾಡಿ ಕೇಂದ್ರಗಳಲ್ಲಿ ಬಾಲ ಸ್ನೇಹಿ ಪರಿಸರ ವಾತವರಣ ನಿರ್ಮಾಣಕ್ಕೆ ಅಗತ್ಯ ಸೌಲಭ್ಯಗಳನ್ನು ಅಳವಡಿಸಲು ಅನುಕೂಲಕರವಾಗಿದೆಯೇ. ಸರಿಯಾದ ನೀರಿನ ಸೌಲಭ್ಯವಿದಯೇ. ಸ್ಮಾಟ್೯ ಕ್ಲಾಸ್, ಅಭ್ಯಾಸಕ್ಕೆ ಸರಿಯಾದ ವಾತವಾರಣ, ಕಾಂಪೌಂಡ್ ಇದೆಯಾ ಎಂದು ಪರಿಶೀಲಿಸಬೇಕು.
ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಕ್ರಿಯಾಶೀಲ ನೌಕರರು ಮತ್ತು ಸಹಾಯಕಿರನ್ನು ನೇಮಿಸಬೇಕು. ಎಲ್ಲಾ ಸೌಲಭ್ಯಗಳನ್ನು ಅಳವಡಿಸದ ಮೇಲೆ ಸರಿಯಾದ ಶಿಕ್ಷಕಿಯಿಲ್ಲ ಅಥವಾ ಅವರಿಗೆ ಮಕ್ಕಳ ಅಭಿವೃದ್ಧಿಯಲ್ಲಿ ಆಸಕ್ತಿಯಿಲ್ಲದಿದ್ದರೆ ಇಷ್ಟೇಲ್ಲ ಮಾಡಿ ಉಪಯೋಗವಾಗವುದಿಲ್ಲ. ಆದ್ದರಿಂದ ಉತ್ಸಾಹಿ ಮತ್ತು ಆಸಕ್ತ ನೌಕರರನ್ನು ತಯಾರಿಸುವ ನಿಟ್ಟಿನಲ್ಲಿ ಸತತವಾಗಿ ತರಬೇತಿ ಕಾರ್ಯಗಳಿಗೆ ಭಾಗವಹಿಸಬೇಕು. ಯಾವುದೇ ಕಾರಣಗಳನ್ನು ಪರಿಗಣಿಸುವುದಿಲ್ಲ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಕ್ಕಳ ಪೌಷ್ಟಿಕಾಂಶ ಮಟ್ಟ ಕುಸಿತ ಮತ್ತು ಅದರ ಅಭಿವೃದ್ಧಿ ಕುರಿತು ಹಲವಾರು ವರದಿಗಳು ಬರುತ್ತಿದ್ದ, ಈ ನಿಟ್ಟಿನಲ್ಲಿ ಸರ್ಕಾರದಿಂದ ಮಕ್ಕಳ ಅಭಿವೃದ್ಧಿಗೆ ಜಾರಿಗೊಳಿಸುವ ಪ್ರತಿಯೊಂದು ಕಾರ್ಯಕ್ರಮವನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದರು.
ಪ್ರತಿಯೊಂದು ಅಂಗನವಾಡಿ ವ್ಯಾಪ್ತಿಯಲ್ಲಿ ಬರುವ ಮಕ್ಕಳನ್ನು ವಯಸ್ಸಿನ ಅಧಾರದ ಮೇಲೆ ಪರೀಕ್ಷಿಸಬೇಕು. ಏನಾದರೂ ಸಮಸ್ಯೆಯಾದಲ್ಲಿ, ಆ ಸಮಸ್ಯೆಯ ಮೂಲ ಮತ್ತು ಅದರ ಪರಿಹಾರದ ಕುರಿತು ವೈದ್ಯರು ಪರೀಕ್ಷಿಸಿ ಮಾಹಿತಿ ನೀಡಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ತನ್ವೀರ್ ಅಸೀಫ್, ರಾಜ್ಯ ಮಕ್ಕಳಾ ರಕ್ಷಣಾ ಆಯೋಗದ ಸದಸ್ಯೆ ಜಯಶ್ರೀ ಚನ್ನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ, ಸಾರ್ವಜನಿಕ ಶಿಕ್ಷಣ ಇಲಾಖೆಯ ಲೀಡ್ ಬ್ಯಾಂಕ್ ಮ್ಯಾನೇಜರ್ ಬಾಬು ಬಳಾಗಾನೂರ್, ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ಸಿಡಿಪಿಒ ಅಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.