ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ

ಸಂಜೆವಾಣಿ ವಾರ್ತೆ,
ವಿಜಯಪುರ,ಜ.24:ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ಮತ್ತು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ವತಿಯಿಂದ ಫೆಬ್ರುವರಿ ಬಜೆಟ್‍ನಲ್ಲಿ ಐ.ಸಿ.ಡಿ.ಎಸ್. ಗೆ ಅನುದಾನ ಹೆಚ್ಚಳ ಮತ್ತು ಕನಿಷ್ಠ ವೇತನವನ್ನು ಘೋಷಿಸುವಂತೆ ಒತ್ತಾಯಿಸಿ ಸಂಸದ ರಮೇಶ ಜಿಗಜಿಣಗಿ ಅವರ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರ ಅಂಗನವಾಡಿ ನೌಕರರ ಸಂಘ ಜಿಲ್ಲಾಧ್ಯಕ್ಷ ಸುನಂದಾ ನಾಯಕ ಮಾತನಾಡಿ, ಆಹಾರ ಆರೋಗ್ಯ ಶಿಕ್ಷಣಕ್ಕಾಗಿರುವ ಯೋಜನೆಗಳಾದ ಐ.ಸಿ.ಡಿ.ಎಸ್. ಎಂ.ಡಿ.ಎಂ. ಎನ್.ಎಚ್.ಎಂ. ಐ.ಸಿ.ಪಿ.ಎಸ್. ಮತ್ತು ಎಸ್.ಎಸ್.ಎ ಎಮ್.ಎನ್.ಆರ್.ಇ.ಜಿ. ಮುಂತಾದ ಯೋಜನೆಗಳನ್ನು ಖಾಯಂ ಮಾಡಬೇಕು. ಭಾರತೀಯ ಕಾರ್ಮಿಕ ಸಮ್ಮೇಳನ ಐ.ಎಲ್.ಸಿ. ಶಿಫಾರಸ್ಸಿನಂತೆ ಈ ಯೋಜನೆಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳು ಸೇರಿದಂತೆ 1 ಕೋಟಿ ನೌಕರರಿಗೆ ಕನಿಷ್ಟ ವೇತನ ನಿವೃತ್ತ ಸೌಲಭ್ಯಗಳನ್ನು ಕೊಟ್ಟು ನೌಕರರು ಎಂದು ಪರಿಗಣಿಸಬೇಕು. 3 ರಿಂದ 6 ವರ್ಷ ಒಳಗಿನ ಮಕ್ಕಳಿಗೆ ಉಚಿತ ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರದಲ್ಲಿ ಕೊಡಲು ಕಾನೂನು ರೂಪಿಸಬೇಕು. ಎನ್.ಇ.ಪಿ. ನಿಲ್ಲಿಸಬೆಕು. 49 ವರ್ಷಗಳಿ ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ 21 ವರ್ಷಗಳಿಂದ ದುಡಿಯುವ ಬಿಸಿಯೂಟ ನೌಕರರಿಗೆ ಆಶಾ ಮತ್ತು ಇತರೆ ಸಿಬ್ಬಂದಿಗಳಿಗೆ 31 ಸಾವಿರ ಕನಿಷ್ಠ ವೇತನ ನಿವೃತ್ತ ಸೌಲಭ್ಯಗಳನ್ನು ಕನಿಷ್ಠ 10 ಸಾವಿರ ಪಿಂಚಣಿ ಕೊಡಬೇಕು. ಈ ಯೋಜನೆಗಳಲ್ಲಿ ದುಡಿಯುವ ಗುತ್ತಿಗೆ ಹೊರಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಕಾಯಂ ಮಾಡಿ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು ಎಂದರು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ ಮಾತನಾಡಿ, ಹೊಸ ಮೊಬೈಲ್‍ಗಳನ್ನು ಕೊಡಬೇಕು. ಮೊಬೈಲ್‍ನಲ್ಲಿ ಮಾಹಿತಿ ಕೊಟ್ಟ ನಂತರ ಪುಸ್ತಕದಲ್ಲಿ ಬರೆಯುವುದನ್ನು ನಿಲ್ಲಿಸಬೇಕು. 6 ವರ್ಷದೊಳಗಿನ ಮಕ್ಕಳನ್ನು ಸಂರಕ್ಷಿಸುವ ಕೆಲಸ ಪ್ರಮುಖವಾಗಿರುವುದರಿಂದ ಚುನಾವಣೆಗಳು ಮತ್ತು ಇತರೆ ಸರ್ವೆ ಕೆಲಸಗಳಿಗೆ ಬಳಕೆ ಮಾಡಬಾರದು. ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಅಂಗನವಾಡಿ ಕೇಂದ್ರಗಳಾಗಿ ಪರಿವರ್ತಿಸಬೇಕು. ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭಿಸಿರುವ Uಏಉ-Uಏಉ ನಿಲ್ಲಿಸಿ ಅಂಗನವಾಡಿ ಕೇಂದ್ರಗಳಲ್ಲಿಯೇ ಈ ಶಿಕ್ಷಣ ಕೊಡಬೇಕು… ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರ, ಪೂರ್ವ ಪ್ರಾಥಮಿಕ ಶಿಕ್ಷಣ ಗರ್ಭಿಣಿ-ಬಾಣಂತಿಯರ ಆರೈಕೆ ಹೊರತು ಪಡಿಸಿ ಉಳಿದ ಕೆಲಸಗಳನ್ನು ನಿರ್ಬಂಧಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕು. ಖಾಲಿ ಹುದ್ದೆಗಳಿಗೆ 3 ತಿಂಗಳೊಳಗೆ ನೇಮಕಾತಿಯಾಗಬೇಕು. ಇಲ್ಲದಿದ್ದರೆ ಹೆಚ್ಚುವರಿ ವೇತನ ಕೊಡಬೇಕು. ಸಹಾಯಕಿ ಇಲ್ಲದ ಅಂಗನವಾಡಿ ಕೇಂದ್ರಗಳಲ್ಲಿ ಖಿಚಿಞe ಊome ಕೊಡಬೇಕು. ಇಲ್ಲದಿದ್ದರೆ ತಾತ್ಕಲಿಕ ಸಹಾಯಕಿಯನ್ನು ನೇಮಕಾತಿ ಮುಂಗಡವಾಗಿ ಕರೆನ್ಸಿ ಹಣ, ಕೋಳಿಮೊಟ್ಟೆ, ಬಾಡಿಗೆ, ಗ್ಯಾಸ್, ತರಕಾರಿ, ಕಾಂಟೆಜಿನ್ನಿ ಬಿಲ್‍ಗಳನ್ನು ಹಾಕಿದೇ ಫಲಿತಾಂಶ ಕೇಳಬಾರದು ಎಂದರು.
ಈ ಸಂದರ್ಭದಲ್ಲಿ ಭಾರತಿ ವಾಲಿ, ಸುರೇಖಾ ರಜಪೂತ, ಅಶ್ವಿನಿ ತಳವಾರ, ಪ್ರತಿಭಾ ಕುರಡೆ, ಸುವರ್ಣಾ ಹಲಗಣಿ, ಸರಸ್ವತಿ ಮಠ, ಶೋಭಾ ಕಬಾಡೆ, ಗಿರಿಜಾ ಸಕ್ರಿ, ಅಣ್ಣಾರಾಯ ಈಳಗೇರ, ಗೀತಾ ಭಜಂತ್ರಿ, ಶೈಲಾ ಕಟ್ಟಿ, ಮುತ್ತವ್ವ ಹೊಸಕೋಟಿ, ಜಯಶ್ರೀ ಪೂಜಾರಿ, ಸುರೇಖಾ ಬೀಳಗಿ, ಕಾಳಮ್ಮ ಬಡಿಗೇರ, ಸುಮಂಗಲಾ ಆನಂದಶೆಟ್ಟಿ, ಸುವರ್ಣಾ ರಾಠೋಡ ಬಿಸ್ಮಿಲ್ಲಾ ಇನಾಮದಾರ, ಸುರೇಖಾ ವಾಗಮೋರೆ, ಭಾರತಿ ಮಠಪತಿ, ವಿಜಯಲಕ್ಷ್ಮೀ ಬಾಬರ, ಸುಜಾತಾ ಬೆಂಬೊಳೆ ಉಪಸ್ಥಿತರಿದ್ದರು.