ಅಂಗನವಾಡಿ ಕೇಂದ್ರದ ಮಕ್ಕಳೊಂದಿಗೆ ಊಟ ಮಾಡಿದ ನ್ಯಾ.ಎಸ್.ಕೆ. ಕನಕಟ್ಟೆ

ಬೀದರ:ಫೆ.23:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೀದರ ಶಿಶು ಅಭಿವೃದ್ಧಿ ಯೋಜನೆ ಬೀದರ, ತಾಲೂಕು ಘೋಡಂಪಳ್ಳಿ ವಲಯದ ವ್ಯಾಪ್ತಿಯ ಚಿಟ್ಟಾ ಗ್ರಾಮದ ಚಿಟ್ಟಾ-01ನೇ ಅಂಗನವಾಡಿ ಕೇಂದ್ರಕ್ಕೆ ಗೌರವಾನ್ವಿತ ಸಿದ್ರಾಮಪ್ಪಾ ಕಲ್ಯಾಣರಾವ್ ಕನಕಟ್ಟೆ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು, ಮತ್ತು ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ ರವರು ಆಕಸ್ಮಿಕವಾಗಿ ಭೇಟಿ ನೀಡಿರುತ್ತಾರೆ.
ಅದರಂತೆ ಸದರಿ ಭೇಟಿ ಸಯಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ಫರೀದಾ ಬೇಗಂ ಮತ್ತು ಸಹಾಯಕಿ ಶ್ರೀಮತಿ ಸುನೀತಾ ಹಾಜರಿದ್ದು, ಕೇಂದ್ರದಲ್ಲಿ ಒಟ್ಟು 22-25 ಮಕ್ಕಳು ಮತ್ತು ಗರ್ಭಿಣಿಯರು 08 ಬಾಣಂತಿಯರು 11 ಹಾಜರಿದ್ದು, ಕಂಡು ಗೌರವಾನ್ವಿತ ಸಿದ್ರಾಮಪ್ಪಾ ಕಲ್ಯಾಣರಾವ್ ಕನಕಟ್ಟೆ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು, ಮತ್ತು ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ ರವರು ತುಂಬಾ ಖುಷಿ ವ್ಯಕ್ತ ಪಡಿಸಿದರು.
ಅದರಂತೆ ಅಂಗನವಾಡಿ ಕೇಂದ್ರದಲ್ಲಿನ ಮಕ್ಕಳೊಂದಿಗೆ ಕುಳಿತು ಊಟ ಮಾಡಿದರು. ಮತ್ತು ಬೀದರ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿನ ಅತ್ಯೂ??ತಮ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಕೇಂದ್ರ ಎಂದು ಖುಷಿ ವ್ಯಕ್ತಪಡಿಸಿದರು.
ಅದೇ ರೀತಿ ಮಾನ್ಯರು ಭೇಟಿ ಸಮಯದಲ್ಲಿ ಶ್ರೀಮತಿ ಶಾರದಾ ಎನ್ ಕಲ್ಮಲಕರ್ ಶಿಶು ಅಬಿವೃಧ್ಧಿ ಯೋಜನಾಧಿಕಾರಿಗಳು, ಬೀದರ ಮತ್ತು ಸಂಬಂಧಪಟ್ಟ ವಲಯದ ಮೇಲ್ವಿಚಾರಿಯಾದ ಶ್ರೀಮತಿ ಇಂದುಮತಿ ಹಾಗೂ ಅಂಗನವಾಡಿ ಕೇಂದ್ರದ ಫಲಾನುಭವಿಗಳು ಹಾಜರಿದ್ದರು.