ಅಂಗನವಾಡಿ ಕೇಂದ್ರದ ಛಾವಣಿ ಕುಸಿದು ಮಗುವಿಗೆ ಗಾಯ

ಶಹಾಪುರ :ಆ.11:ಕೇಂದ್ರದಲ್ಲಿ ಗ್ರಾಮದ ಅಂಗನವಾಡಿ 5.0 ಹಾಕುತ್ತಿದ್ದ ವೇಳೆ ಮಲ್ವಾವಣಿಯ ಸಿಮೆಂಟ್ ಪದರು ಕುಸಿದು ಬಿದ್ದು 10 ತಿಂಗಳ ಕೀರ್ತಿ ಎನ್ನುವ ಮಗುವಿಗೆ ಗಾಯಗಳಾಗಿವೆ.
ಲಸಿಕೆ ಹಾಕಿಸಿಕೊಳ್ಳಲು ಪೆÇೀಷಕರೊಡನೆ ಮಗು ಕೇಂದ್ರಕ್ಕೆ ಬಂದಿದ್ದು ಈ ವೇಳೆ ಅವಘಡ ಸಂಭವಿಸಿದೆ. ಒಟ್ಟ 6 ಮಕ್ಕಳು ಹೋಗಿದ್ದು ಅದರಲ್ಲಿ ನಾಲ್ಕು ಮಕ್ಕಳಿಗೆ ಲಸಿಕೆ ಹಾಕಿ ಕಳುಹಿಸಲಾಗಿದೆ. ಆದರೆ ಇನ್ನುಳಿದ ಇಬ್ಬರು ಮಕ್ಕಳಲ್ಲಿ ಕೀರ್ತಿ ಎನ್ನುವ ಮಗುವಿನ ಮೇಲೆ ಛಾವಣಿ ಕುಸಿದಿದೆ. ಗಾಯಗೊಂಡ ಮಗುವನ್ನು ಆರೋಗ್ಯ ಇಲಾಖೆ ಸಿಬ್ಬಂದಿಗಳು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ.
ಡಾ.ರಮೇಶ ಗುತ್ತೇದಾರ ಅವರು ಭೇಟಿ ನೀಡಿ ಪರಿಶೀಲಿಸಿದರು. ಸರಕಾರದ ಎನ್ನುವುದಕ್ಕೆ ಕಟ್ಟಡಗಳು ಕಳಪೆಯಾಗಿವೆ ಗುರುವಾರ ಸಂಭವಿಸಿದ ಅಂಗನವಾಡಿ ಛಾವಣಿ ಕುಸಿದು ಆಗಿರುವ ಅನಾಹುತವೇ ಸಾಕ್ಷಿ.
ಛಾವಣಿ ಕುಸಿತದಿಂದಾಗಿ ಆಗಬಹುದಾದ ಅನಾಹುತ ತಪ್ಪಿದಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವ ಗ್ರಾಮಸ್ಥರು, ಇಂತಹ
ಅಂಗನವಾಡಿ ಕಟ್ಟಡದಲ್ಲಿನ ಕಲಿಕೆಗೆ ಮಕ್ಕಳನ್ನು ಕಳುಹಿಸುವುದು ಹೇಗೆ? ಅಧಿಕಾರಿಗಳು ಒಂದು ಹೋಗುತ್ತಾರೆ. ಆದರೆ ಒಂದು ವೇಳೆ ಅನಾಹುತ
ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಸಿಡಿಪಿಒ ಕಾಲಹರಣ ಕಚೇರಿಯಲ್ಲಿ
ಇಷ್ಟೆಲ್ಲಾ ಅನಾಹುತ ಸಂಭವಿಸಿದ ಬಳಿಕವು ಸಿಡಿಪಿಒ ಮೀನಾಕ್ಷಮ್ಮ ಪಾಟೀಲ್ ಅವರು ನಿದ್ದೆ
ಮಂಪರಿನಲ್ಲಿದ್ದಾರೆಯ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.
ಈಗಾಗಲೇ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಸಾಕಷ್ಟು ಕೇಂದ್ರಗಳು ದುರಸ್ಥಿಗೆ ಬ0ದಿದ್ದು, ಒಂದು ಬಾರಿಯೂ ಸಹ ಯಾವುದೇ
ಕೇಂದ್ರಕ್ಕೆ ಭೇಟಿ ನೀಡುವ ಕೆಲಸ ಮಾಡಿಲ್ಲಾ, ಸಿಡಿಪಿಒ ಅವರು ಭೇಟಿ ನೀಡಿ ಪರಿಶೀಲಿಸಿದ್ದರೆ ಇಂತಹ ಅಪಾಯ ಸಂಭವಿಸುತ್ತಿರಲಿಲ್ಲಾ. ಯಾರೇ ಪ್ರಶ್ನೆ ಮಾಡಿದರು ಸಿಬ್ಬಂದಿಗಳ ಮೇಲೆ ಹಾಕಿ ಜಾರಿಕೊಳ್ಳುತ್ತಿದ್ದಾರೆ ಮತ್ತು ಅಧಿಕಾರ ವಹಿಸಿಕೊಂಡ ನಂತರ ಕಚೇರಿಯಲ್ಲಿ ಕುಳಿತು ಕಾಲಹರಣ ಮಾಡುತ್ತಿದ್ದಾರೆ. ಅವರು
ಯಾವುದೇ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವ ಕೆಲಸ ಮಾಡುತ್ತಿಲ್ಲಾ, ಮತ್ತು ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ದೊರೆಯುವ ಪೌಷ್ಟಿಕಾಂಶಯುಕ್ತ ಆಹಾರ ಸರಬರಾಜಿನಲ್ಲಿಯೂ ಅವ್ಯವಹಾರದ ವಾಸನೆ ಬರುತ್ತಿದೆ. ಅಧಿಕಾರಿಗಳು ಬೇಜವಾಬ್ದಾರಿಯಿಂದ ಬಡ ಮಕ್ಕಳ ಜೀವ ಬಲಿಯಾಗಲಿದ್ದು ಕೂಡಲೇ ಸಚಿವರು ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಅಷ್ಟೇ ಅಲ್ಲದೇ ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ ಆಗಿರುವ ಕಟ್ಟಡ ದುರಸ್ತಿ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ನಮ್ಮ ಕರ್ನಾಟಕ ಸೇನೆಯ ತಾಲ್ಲೂಕು ಅಧ್ಯಕ್ಷ ಸಿದ್ದು ಪಟ್ಟೇದಾರ ಆಗ್ರಹಿಸಿದರು.
ಸಚಿವರು ಭೇಟಿ ನೀಡಲಿ
ಸ್ಥಳೀಯ ಶಾಸಕರು ಹಾಗೂ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕುರಿತು ಪರಿಶೀಲಿಸಬೇಕು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲಾ ತಾಲೂಕಿನಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿ ಸಾಕಷ್ಟು ಸಮಸ್ಯೆಗಳು ತಾಂಡವವಾಡುತ್ತಿದ್ದು, ಕ್ಷೇತ್ರದಲ್ಲಿನ ಎಲ್ಲಾ ಅಂಗನವಾಡಿ ಕಟ್ಟಡಗಳಿಗೆ ಭೇಟಿ ನೀಡಿ ಕಟ್ಟಡದ ಸ್ಥಿತಿ ಗತಿಗಳ ಪರಿಶೀಲನೆ ಮಾಡಬೇಕು. ಮುಂದೆ ಇಂತಹ ಅವಘಡಗಳು ಸಂಭಂವಿಸದಂತೆ ಸಿಡಿಪಿಓ ಅವರಿಗೆ ಎಚ್ಚರಿಕೆ ನೀಡಬೇಕು