ಅಂಗನವಾಡಿ ಕೇಂದ್ರದಿಂದ ಮಕ್ಕಳ ಪೋಷಣೆ ರ್ಯಾಲಿ

ವಾಡಿ:ಎ.2: ಮಗು ಜನನವಾದ ತಕ್ಷಣವೇ ತಾಯಿ ಎದೆ ಹಾಲುಣಿಸುವದ್ದರಿಂದ ಮಗುವಿನ ಪೌಷ್ಠಿಕತೆ ಹೆಚ್ಚಿಸುತ್ತಿದೆ, ಹಾಲುಣಿಸುವದು ನಿರ್ಲಕ್ಷ್ಯಿಸಿದರೆ ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಕಮರವಾಡಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ನೀಲಮ್ಮ ಆರ್.ಶಿರವಾಳ ಹೇಳಿದÀರು.

ಸಮೀಪದ ಕಮರವಾಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ, ಇತ್ತೀಚಿಗೆ ಶಿಶು ಅಭಿವೃದ್ದಿ ಇಲಾಖೆಯ ಆದೇಶದಂತೆ ಅಂಗನವಾಡಿ 1ರ ಕೇಂದ್ರದ ವತಿಯಿಂದ ಮಕ್ಕಳ ಪೋಷಣೆ ರ್ಯಾಲಿ ಸಭೆಯ ಉದ್ದೇಶಿಸಿ ಅವರು ಮಾತನಾಡಿದರು. ಮಗವಿನ ಮೊದಲ ಶಿಕ್ಷಣ ಅಂಗನವಾಡಿ ಕೇಂದ್ರದಲ್ಲಿಯಾಗುತ್ತದೆ.

ಮಗವಿನ ಬೆಳವಣಿಗಾಗಿ ಉತ್ತಮವಾಗಲಿ ಎನ್ನುವ ಉದ್ದೇಶದಿಂದ ಸರಕಾರ ಹಲವಾರು ಯೊಜನೆಗಳು ತಂದಿದೆ. ಮಗುವಿನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಯ ಭದ್ರ ಅಡಿಪಾಯ ಹಾಕುವುದು ಅಂಗನವಾಡಿ ಕಾರ್ಯಕರ್ತೆಯರ ಗಿರಿಯಾಗಿದೆ ಎಂದು ಹೇಳಿದ ಅವರು, ಶಿಶು ಅಭಿವೃದ್ದಿ ಇಲಾಖೆ ಅಧಿಕಾರಿಗಳ ಆದೇಶದ ಮೆರೆಗೆ ನಾವು ವಿವಿಧ ಸಭೆ ಸಮಾರಂಭಗಳು ಹಮ್ಮಿಕೊಳ್ಳುವ ಮೂಲಕ ಮಕ್ಕಳ ಮತ್ತು ಗರ್ಭಣಿ ಮಹಿಳೆಯರ ನೆರವಿಗೆ ನಾವು ಶ್ರಮಿಸುತ್ತಿದ್ದೇವೆ ಎಂದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಅಶೋಕ ಜಿ.ಪೊದ್ದರ, ದೈಹಿಕ ಶಿಕ್ಷಕ ಸುರೇಶಕುಮಾರ, ಸಹ ಶಿಕ್ಷಕರಾದ ವೀರಣ್ಣ ಪಂಚಾಳ, ಯಶೋಧ ರೆಡ್ಡಿ, ಮಂಕೂಳಾ ಎಂ. ಆರ್, ಶೈಲಾಶ್ರೀ ಕೌಲಾಹಾಗ, ರೀಜೀವಾನ್ ಬೇUಂ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು.