ಅಂಗನವಾಡಿ ಕೇಂದ್ರದಲ್ಲಿ ಹೊಸ ವರ್ಷಾಚರಣೆ

ಲಿಂಗಸುಗೂರು.ಜ.೩-ವರ್ಷದ ಮೊದಲ ದಿನವಾದ ಶುಕ್ರವಾರದಂದು ಪಟ್ಟಣದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳೊಂದಿಗೆ ಶಿಕ್ಷಕರು ಹೊಸ ವರ್ಷಾಚರಣೆ ಮಾಡಿದರು.
ಕೇಕ್ ಕತ್ತರಿಸಿ ಮಕ್ಕಳಿಗೆ ಸಿಹಿ ತಿನ್ನಿಸುವ ಮೂಲಕ ಮೇಲ್ವಿಚಾರಕಿ ಲಕ್ಷ್ಮಿ ಹಣಗಿ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು.
ಮಕ್ಕಳೊಂದಿಗೆ ಪೋಷಕರು ಕೆಲ ಅಂಗನವಾಡಿ ಕೇಂದ್ರದಲ್ಲಿ ಭಾಗವಹಿಸಿದ್ದರು.