ಅಂಗನವಾಡಿ ಕೇಂದ್ರಗಳ ಪುನರ್ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ.ಉಷಾ ಬಿ

ಬೀದರ ನ.13: ಬೀದರ ತಾಲೂಕಿನ ಘೋಡಂಪಳ್ಳಿ ವಲಯದ ಚಿಟ್ಟಾವಾಡಿ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಅಂಗನವಾಡಿ ಕೇಂದ್ರಗಳ ಪುನರ್ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರದ ಜಂಟಿ ನಿರ್ದೇಶಕರಾದ ಡಾ|| ಉಷಾ ಬಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಷ್ಟು ದಿನ ಕೋವಿಡ್-19 ನಿಮಿತ್ತ ಎಲ್ಲಾ ಅಂಗನವಾಡಿ ಕೇಂದ್ರಗಳು ನಡೆದಿರಲಿಲ್ಲ. ನವೆಂಬರ್ 8ರಿಂದ ರಾಜ್ಯಾದಂತ ಎಲ್ಲಾ ಅಂಗನವಾಡಿ ಕೇಂದ್ರಗಳು ಪುನರ್ ಪ್ರಾರಂಭವಾಗುತ್ತಿವೆ. ಈ ವೇಳೆ ಕೋವಿಡ್-19 ನಿಯಮಗಳು ಪಾಲನೆಯಾಗಬೇಕು ಎಂದು ತಿಳಿಸಿದರು.

ಮೆಚ್ಚುಗೆ: ಜಂಟಿ ನಿರ್ದೇಶಕರು ಅಂಗನವಾಡಿ ಕೇಂದ್ರದಲ್ಲಿನ ಆಟಿಕೆ ಸಾಮಾನುಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ರೀತಿ ಸ್ಥಳಿಯವಾಗಿ ಸಿಗುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ಅನೇಕ ರಿತಿಯ ಸಾಮಾನುಗಳನ್ನು ತಯಾರಿಸಿ ಮಕ್ಕಳು ಚಟುವಟಿಕೆಯಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ. ಇದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ, ಬೌದ್ಧಿಕ ಹಾಗೂ ದೈಹಿಕ ಬೆಳವಣಿಗೆ ಆಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಅವರು ಇದೇ ಸಂದರ್ಭದಲ್ಲಿ ಹೂವು, ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಅಂಗನವಾಡಿ ಕೇಂದ್ರ ನೋಡಿ ಸಂತೋಷವನ್ನು ವ್ಯಕ್ತಪಡಿಸುತ್ತಾ, ಕೇಂದ್ರದ ಗರ್ಭಿಣಿ, ಬಾಣಂತಿ ಹಾಗೂ ಮಕ್ಕಳಿಗೆ ಅಂಗನವಾಡಿ ಕೇಂದ್ರದಲ್ಲಿ ಯಾವ ಯಾವ ಆಹಾರ ಪದಾರ್ಥಗಳು ಕೊಡುತ್ತಾರೆ ಎಂದು ಫಲಾನುಭವಿಗಳ ಜೊತೆ ಚರ್ಚಿಸಿದರು. ಇದಕ್ಕೆ ಕೇಂದ್ರದ ಫಲಾನುಭವಿಗಳು ಕೇಂದ್ರದಲ್ಲಿ ವಿತರಿಸುವ ಎಲ್ಲಾ ಆಹಾರ ಪದಾರ್ಥಗಳ ಹೆಸರುಗಳನು ಒಂದೊಂದಾಗಿ ಹೇಳುತ್ತಾ ತಮ್ಮ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಟ್ಟಾ ಗ್ರಾಮ ಪಂಚಾಯತ ಅಧ್ಯಕ್ಷರಾದ ರಮೇಶ ಬಿರಾದಾರ ಅವರು ವಹಿಸಿದ್ದರು. ಬೀದರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ರವೀಂದ್ರ ಎಸ್. ರತ್ನಾಕರ್, ಬೀದರ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳಾದ ಜಗದೀಶ, ಬೀದರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮಹಾಂತೇಶ ಭಜಂತ್ರಿ, ಹುಮನಾಬಾದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶಿವಪ್ರಕಾಶ ಹಿರೇಮಠ, ಚಿಟ್ಟಾ ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ಭೀಮರಾವ್, ಘೋಡಂಪಳ್ಳಿ ವಲಯದ ಮೇಲ್ವಿಚಾರಕಿಯಾದ ಯಲ್ಲಮ್ಮಾ, ಚಿಟ್ಟಾ ಗ್ರಾಮ ಪಂಚಾಯತನ ಎಲ್ಲಾ ಸದಸ್ಯರು, ಚಿಟ್ಟಾವಾಡಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಕೇಂದ್ರದ ಫಲಾನುಭವಿಗಳಾದ ಗರ್ಭಿಣಿಯರು, ಬಾಣಂತಿಯರು, ಮಕ್ಕಳು, ಕೀಶೊರಿಯರು ಹಾಗೂ ಗ್ರಾಮಸ್ಥರು ಹಾಜರಿದ್ದರು. ಬೀದರ ಶಿಶು ಅಭಿವೃದ್ಧಿ ಯೋಜನಾಧಮಹಾಂತೆಶ ಭಂಜತ್ರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಬೀದರ ಅವರು ನಿರೂಪಣೆ ಮಾಡಿದ್ದರು.