ಅಂಗನವಾಡಿ ಕೇಂದ್ರಗಳಿಗೆ ನೂತನ ಟ್ಯಾಬ್ ನೀಡಲು ಒತ್ತಾಯ


ಸಂಜೆವಾಣಿ ವಾರ್ತೆ
ಸಂಡೂರು:ಜು: 13:  ಸಂಡೂರು: ಅಂಗನವಾಡಿ ಕೇಂದ್ರಗಳಿಗೆ ಕರ್ತವ್ಯ 4ವರ್ಷಗಳ ಹಿಂದೆ ನೀಡಿದ ಮೊಬೈಲ್ ಇಂದು ಕೆಲಸ ಮಾಡುತ್ತಿಲ್ಲ ಅವುಗಳನ್ನು ಹಿಂಪಡೆದು ನೂತನ ಟ್ಯಾಬ್ ನೀಡಿ ಸರ್ಕಾರದ ಯೋಜನೆಗಳ ಸರಿಯಾದ ಅನುಷ್ಠಾನಕ್ಕೆ ಅವಕಾಶ ಕೊಡಿ ಎಂದು ಅಂಗನವಾಡಿ ಕಾರ್ಯಕರ್ತೆಯರ ಅಧ್ಯಕ್ಷೆ ನಾಗರತ್ನಮ್ಮ ಒತ್ತಾಯಿಸಿದರು.
ಅವರು  ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅವರಣದಲ್ಲಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿ ಕೊಟ್ಟ ಮೊಬೈಲ್ ಕಾರ್ಯನಿರ್ವಹಿಸುತ್ತಿಲ್ಲ, ಹಿಂಪಡೆಯಿರಿ, ನೆಟ್ವರ್ಕ್, ಡಾಟ್ ಪ್ಯಾಕ್ಸ್‍ಗಳನ್ನು ಖಾತರಿ ಮಾಡಬೇಕು. ಆ ಮೊಬೈಲ್ / ಟ್ಯಾಬ್ಲೆಟ್‍ಗಳಲ್ಲಿ ಪ್ರಾದೇಶಿಕ ಭಾಷೆಗಳ ಪ್ರೋಗ್ರಾಮ್ ಗಳನ್ನು ಆದರಿಸಬೇಕು. ಕಿರುಕುಳ ನೀಡಬಾರದು. ‘ಫೋಷಣೆ ಅಭಿಯಾನ’ಕ್ಕೆ ಆಧಾರ್ ಅಥವಾ ಫೋನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಎಂಬ ಆದೇಶವನ್ನು ಹಿಂಪಡೆಯಬೇಕು. ಆ ಸಂಬಂಧ ಸುಪ್ರೀಂಕೋರ್ಟಿನ ಮಾರ್ಗದರ್ಶನ ಪಾಲಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಇತರೆ ಇಲಾಖೆಗಳ ಕೆಲಸಗಳನ್ನು ಹಚ್ಚಬಾರದು ಎಂದು ಅಗ್ರಹಿಸಿದರು. ಈ ಹಿಂದಿನ ಸರ್ಕಾರ 1000 ವೇತನ ಹೆಚ್ಚಳ ಮಾಡುವುದಾಗಿ ಘೋಷಿಸಿತ್ತು ಅದರೆ ಇಲ್ಲಿಯವರೆಗೆ ಅನುಷ್ಠಾನ ಗೊಂಡಿಲ್ಲ ತಕ್ಷಣ ಅನುಷ್ಠಾನಗೊಳಿಸಬೇಕು ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಕವಿತ ಅವರು ಮಾತನಾಡಿ ಇಡೀ ರಾಜ್ಯದ ತುಂಬೆಲ್ಲಾ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಳೆ ಮೊಬೈಲ್ ಬಳಸದೇ ಇರಲು ತೀರ್ಮಾನಿಸಿದ್ದು ಎಲ್ಲವನ್ನು ಪುಸ್ತಕಗಳಲ್ಲಿ ಹಳೆ ಪದ್ದತಿಯಲ್ಲಿ ನಮೂದಿಸುತ್ತೇವೆ, ರಾಜ್ಯ ಸರ್ಕಾರು ಸರ್ಕಾರಿ ಪಬ್ಲಿಕ್ ಶಾಲೆಗಳಲ್ಲಿ ಎಲ್.ಕೆ.ಜಿ. ಹಾಗೂ ಯು.ಕೆ.ಜಿ. ತರಗತಿಗಳು ಪ್ರಾರಂಭವಾಗಿದ್ದು ವ್ಯವಸ್ಥಿತವಾಗಿ ಅಂಗನವಾಡಿ ಮುಚ್ಚುವ ಕಾರ್ಯ ನಡೆಯುತ್ತಿದ್ದು ಇದನ್ನು ನಿಲ್ಲಿಸಿ ಅಂಗನವಾಡಿ ಕೇಂದ್ರಗಳಲ್ಲಿಯೇ ಪ್ರಾರಂಭಿಸಬೇಕು, ತರಕಾರಿ ಬೆಲೆ ಗಗನಕ್ಕೇರಿದ್ದು ನೀಡುವ ಬೆಲೆ ಕಡಿಮೆ ಇದೆ ಬೆಲೆ ಏರಿಕೆಗೆ ತಕ್ಕಂತೆ ತರಕಾರಿ ಹಣ ನೀಡಬೇಕು, ಮೊಟ್ಟೆ ವಿತರಣೆಯಲ್ಲಿ ಕೆಟ್ಟ ಮೊಟ್ಟೆಗಳನ್ನು ನೀಡುತ್ತಿದ್ದು ಅವುಗಳನ್ನು ಹಿಂತಿರುಗಿಸುತ್ತಿದ್ದು ಅವುಗಳಿಗೂ ಸಹ ಸರಿಯಾದ ಹಣ ಹಾಕಬೇಕು, ಗ್ಯಾಸ ಹಣ ಮುಂಗಡವಾಗಿ ನೀಡುವ ಮೂಲಕ ಉತ್ತಮ ಕಾರ್ಯನಿರ್ವಹಿಸಲು ಅನುಕೂಲಮಾಡಿಕೊಡಬೇಕು ಎಂದರು.
ಈ ಸಂದರ್ಭಲದಲ್ಲಿ ಸಿ.ಡಿ.ಪಿ.ಓ. ಎಳೆ ನಾಗಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು ಅವರು ಪ್ರತಿಕ್ರಿಯಿಸಿ ಮೊಬೈಲ್ ಹಿಂಪಡೆಯಲು ಸಾಧ್ಯವಿಲ್ಲ ಕಾರಣ ಸರ್ಕಾರದ ಅದೇಶದಂತೆ ಕಾರ್ಯನಿರ್ವಹಿಸುತ್ತಿದ್ದೇವೆ, ಎಲ್ಲಾ ಬೇಡಿಕೆಗಳ ಬಗ್ಗೆ ಉನ್ನತಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ತಾಲೂಕಿನ ಅಂಗನವಾಡಿ ಕಾರ್ಯಕರ್ತೇಯರಾದ ಅಧ್ಯಕ್ಷೆ ಜಿ.ನಾಗರತ್ನಮ್ಮ, ಪ್ರಧಾನ ಕಾರ್ಯದರ್ಶಿ ಟಿ.ಕವಿತ, ಉಪಾಧ್ಯಕ್ಷೆ ಜಿ.ಈರಮ್ಮ, ಕಾರ್ಯದರ್ಶಿ ಶಶಿಕಲಾ, ಖಜಾಂಚಿ ಪಿ. ವೆಂಕಟಲಕ್ಷ್ಮೀ, ಸಹಖಜಾಂಚಿ ಮೀನಾಕ್ಷಿ, ಪೂರ್ಣಿಮ, ಜಂಟಿ ಕಾರ್ಯದರ್ಶಿ ಚಂದ್ರಕಲಾ, ಭಾರತಿ ಗಂಗಮ್ಮ, ಜಿ.ಹೆಚ್.ಸಾವಿತ್ರಿ ಶಕುಂತಲಾ, ಬಸಮ್ಮ.ಬಿ. ನೇತ್ರಾವತಿ ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರು ಉಪಸ್ಥಿತರಿದ್ದರು.