ಅಂಗನವಾಡಿ ಕೇಂದ್ರಗಳಿಗೆ ಕೊಡಬೇಕಾದ ಸೌಲಭ್ಯಗಳನ್ನ ನೀಡಿ : ದುರ್ಗಮ್ಮ ಗೌನಳ್ಳಿ

ಜೇವರ್ಗಿ :ಜು.5 : ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಕೋಡಬೇಕಾದ ಸೌಲಭ್ಯಗಳನ್ನ ಕೂಡಲೆ ನೀಡಬೇಕೆಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕ ಅಧ್ಯಕ್ಷೆ ಧುರ್ಗಮ್ಮ ಗೌನಳ್ಳಿ ಆಗ್ರಹಿಸಿದರು.

ಪಟ್ಟಣದ ಹಳೆ ತಹಸೀಲ್ ಆವರಣದಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎದುರಿಗೆ ಪ್ರತಿಭಟನೆ ನಡೆಸಿದರು.

ತಾಲೂಕಿನ ಅಂಗವಾಡಿ ಕೇಂದ್ರಗಳಿಗೆ ತರಕಾರಿ ಹಣ, ಕೇಂದ್ರಗಳ ಬಾಡಿಗೆ, ಪೋಷಣಾ ಅಭಿಯಾನ ಕಾರ್ಯಕ್ರಮದ ಖರ್ಚು ವೆಚ್ಚ, ಮೋಟ್ಟೆ ವಿತರಣೆ ಸೇರಿದಂತೆ ಅನೇಕ ತೋದರೆಗಳನ್ನು ಕೇಂದ್ರಗಳ ಶಿಕ್ಷಕಿಯರು ಅನುಭವಿಸುತ್ತಿದ್ದಾರೆ. ಅಧಿಕಾರಿಗಳಿಗೆ ಈ ಕುರಿತು ಮನವಿ ಮಾಡಿದರು ಕೂಡ ಯಾವುದೆ ಪ್ರಯೋಜನೆ ಆಗಿಲ್ಲ. ಬೆಂಗಳೂರಿಗೆ 10 ದಿನಗಳಕಾಲ ಹೋರಾಟಕ್ಕೆ ಹೋದವರಿಗೆ ಗೌರವಧನ ಕೂಡಲೆ ನೀಡಬೇಕು. ಕಳೆದ ಮಾರ್ಚ ತಿಂಗಳಿನಿಂದ ಇಲ್ಲಿಯವರೆಗು ಸಲಿಂಡರ್‍ಗಳನ್ನ ನೀಡಿಲ್ಲ. ಜುಲೈ ತಿಂಗಳಿಂದ ಸಿಲಿಂಡರ್ ನೀಡುವವರೆಗು ಮಕ್ಕಳಿಗೆ ಅವರ ಮನೆಗೆ ಆಹಾರವನ್ನು ವಿತರಿಸುತ್ತೆವೆ.

ತರಕಾರಿಗೆ ನಿಡಬೇಕಾದ ಹಣ ನೀಡಬೇಕು. ಆಹಾರ ಸಾಮಗ್ರಿಗಳನ್ನ ಸರಿಯಾದ ಸಮಯಕ್ಕೆ ವಿತರಿಸಬೇಕು, ಬಾಡಿಗೆ ಕಟ್ಟಡದಲ್ಲಿ ಇರುವ ಕೇಂದ್ರಗಳಿಗೆ ಬಾಡಿಗೆ ಹಣ ನೀಡಬೇಕು. ಅಂಗನವಾಡಿ ಶಿಕ್ಷಕಿಯರ ಈ ಎಲ್ಲಾ ಸಮಸ್ಯೆಗಳನ್ನು ಕೂಡಲೆ ಬಗೆಹರಿಸಬೇಕು. ಅಂಗನಾವಾಡಿ ಕೇಂದ್ರದ ಮಕ್ಕಳಿಗೆ ಅನುಕುಲ ಮಾಡಬೇಕು, ಇಲ್ಲವಾದಲ್ಲಿ ಮುಂದಿನದಿನಗಳಲ್ಲಿ ಉಘ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸುಮೀತ್ರಾ ಕಟ್ಟಿ, ಗಜರಾಬಾಯಿ ಬಿರಾದಾರ, ಕಮಲಾ, ಜಯಶ್ರೀ, ಶರಣಮ್ಮ, ಕಮಲವ್ವ, ಉಮಬಾಯಿ, ಜಗದೇವಿ, ಸರೂಬಾಯಿ, ಸಾವಿತ್ರಿ, ಶೈಲಾಶ್ರೀ, ಭಾರತಿ ಗುಜಗುಂಡ್, ಲಕ್ಷ್ಮೀ, ಸುವರ್ಣ ಹಿರೇಮಠ, ಗುರುಬಾಯಿ, ಕಾಶಿಬಾಯಿ, ಸಂಗಿತಾ, ನೀಲಮ್ಮ, ಬಸಮ್ಮ, ಚಂದ್ರಕಲಾ, ಬೋರಮ್ಮ, ಭಾರತಿ, ಸುಜಾತ, ಪುತಳಾಬಾಯಿ, ರೇಷ್ಮಾಪಟೇಲ್, ಗೀತಾ, ಚನ್ನಮ್ಮ, ರೋಹೀಣಿ, ಲಲೀತಾ, ಲಕ್ಷ್ಮೀಬಾಯಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.