ಅಂಗನವಾಡಿ ಕೇಂದ್ರಗಳಲ್ಲಿ ಗುಣಮಟ್ಟದ  ಪೌಷ್ಟಿಕ ಆಹಾರ ನೀಡಲು ಸೂಚನೆ

ಸಂಜೆವಾಣಿ ವಾರ್ತೆ
ದಾವಣಗೆರೆ; ಸೆ.21; ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ, ಬಾಣಂತಿಯರಿಗೆ ಮತ್ತು  ಮಕ್ಕಳಿಗೆ ಉತ್ತಮ ಗುಣಮಟ್ಟದ  ಹಾಗೂ ಪೆÇೀಷಕಾಂಶಯುತ  ಆಹಾರ ಪದಾರ್ಥವನ್ನು  ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರಕ ಪೌಷ್ಟಿಕ ಆಹಾರ ಪದಾರ್ಥಗಳ ದರ ನಿಗದಿಗಾಗಿ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆ (Wಅಆ)ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಕ್ಕಳು, ಬಾಣಂತಿಯರು ಹಾಗೂ ಗರ್ಭಿಣಿಯರು ಅಪೌಷ್ಟಿಕತೆಗೆ ತುತ್ತಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಬ್ದಾರಿಯಾಗಿದೆ. ಆದ್ದರಿಂದ ಅಂಗನವಾಡಿ ಕೇಂದ್ರಗಳಲ್ಲಿ ಗುಣಮಟ್ಟದ ಪೌಷ್ಟಿಕ ಅಹಾರ ಹಾಗೂ ಕಡ್ಡಾಯವಾಗಿ ಮೊಳಕೆ ಕಟ್ಟಿದ ಕಾಳುಗಳನ್ನೆ ನೀಡಬೇಕು ಪೌಷ್ಟಿಕಾಂಶದ ಕೊರತೆ ಉಂಟಾದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಕ್ರಮ ವಹಿಸಬೇಕು ಎಂದರು.    ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿದಿನ ಮಧ್ಯಾಹ್ನ ಗರ್ಭಿಣಿಯರಿಗೆ, ಬಾಣಂತಿಯರಿಗೆ  ನೀಡುತ್ತಿರುವ ಹಾಲಿನ ಬದಲಾಗಿ ಮೊಸರು ಮಾಡಿಕೊಟ್ಟರೆ ಅವರಲ್ಲಿ ಜೀರ್ಣ ಕ್ರಿಯೆಗೆ ಉಪಯುಕ್ತವಾಗುತ್ತದೆ. ಪ್ರತಿ ತಿಂಗಳ ಮೂರನೇ ಶನಿವಾರದಂದು   ಸ್ಥಳೀಯರ ಸಹಾಯದಿಂದ ಅಂಗನವಾಡಿ ಕೇಂದ್ರದ  ಮಕ್ಕಳಿಗೆ ಮಮತೆಯ ಕೈತುತ್ತು ಎಂಬ ಶೀರ್ಷಿಕೆಯಡಿಯಲ್ಲಿ   ಪೌಷ್ಟಿಕ ಪದಾರ್ಥಗಳನ್ನು ಒಳಗೊಂಡ ಆಹಾರವನ್ನು  ನೀಡಲು ಕ್ರಮವಹಿಸಬೇಕು.ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಕೈತೋಟ ನಿರ್ಮಿಸಿ, ಅಕ್ಷಯ ಪಾತ್ರೆಗಳನ್ನಿಟ್ಟು ಸ್ಥಳೀಯವಾಗಿ ಬೆಳೆಯುವಂತಹ ತರಕಾರಿ, ಧಾನ್ಯಗಳನ್ನು  ಬಳಸಿ ಆಹಾರ ಪದಾರ್ಥವನ್ನು ತಯಾರಿಸಿ ಗರ್ಭಿಣಿಯರಿಗೆ ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ನೀಡಬೇಕು. ಅಂಗನವಾಡಿಗಳಲ್ಲಿ ದೈನಂದಿನ ತಯಾರಿಸುವ ಆಹಾರಗಳ ಪದಾರ್ಥಗಳ ಬದಲಾಗಿ  ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಕೊಡಬೇಕು ಎಂದರು.