ಅಂಗನವಾಡಿ ಕೇಂದ್ರಕ್ಕೆ ಯೋಜನಾಧಿಕಾರಿ ಭೇಟಿ ಪರಿಶೀಲನೆ

ರಾಯಚೂರು,ಜೂ.೧೭-
ಕನ್ನಡ ಸೇನೆ ಕರ್ನಾಟಕ ಸಂಘಟನೆಯವರ ದೇವಸೂಗೂರು ಅಂಗನವಾಡಿ ಕೇಂದ್ರ ಸಂಖ್ಯೆ ೧ ಕಟ್ಟಡ ಶಿಥಿಲಾವಸ್ಥೆಯಲ್ಲಿ ಇದೆ ಎಂದು ದೂರಿನ ಮೇರೆಗೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಮತ್ತು ಮೇಲ್ವಿಚಾರಕಿ ಜಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸದರಿ ಕಟ್ಟಡವು ಜಿಯೋ ಪಾಲಿಮರ್ ಕಾಂಕ್ರಿಟ್‌ನಿಂದ ನಿರ್ಮಾಣಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.