ಅಂಗನವಾಡಿ ಕೇಂದ್ರಕ್ಕೆ ತಡೆಗೋಡೆ ನಿರ್ಮಿಸಲು ಎಡಿ ನಿರ್ದೇಶನ

ರಾಯಚೂರು, ನ.೨೩- ಜಿಲ್ಲೆಯ ಸಿರವಾರ ತಾಲೂಕಿನ ಚಾಗಬಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಜಾಲಾಪುರ ಕ್ಯಾಂಪ್ ಗೆ ಸಿರವಾರ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ ಶರ್ಫುನ್ನಿಸಾ ಬೇಗಂ ಅವರು ಇಂದು ಭೇಟಿ ನೀಡಿ ನರೇಗಾ ಕಾಮಗಾರಿ ಪರಿಶೀಲಿಸಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಜಾಲಾಪುರ ಕ್ಯಾಂಪ್ ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಎರಡನೇ ಅಂಗನವಾಡಿ ಕಟ್ಟಡ ಕಾಮಗಾರಿ ಕೈಗೊಳ್ಳಲಾಗಿದ್ದು, ಅಂಗನವಾಡಿ ಕೇಂದ್ರದ ಹಿಂದುಗಡೆ ಕೆರೆ ಇರುವುದರಿಂದ ಶಾಲಾ ಮಕ್ಕಳು, ಅಂಗನವಾಡಿ ಕೇಂದ್ರದ ಮಕ್ಕಳು ಕೆರೆಯ ಕಡೆ ಹೋಗದಂತೆ ತಡೆಯಲು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅಂಗನವಾಡಿ ಕೇಂದ್ರದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಂಪೌಂಡ್ ನಿರ್ಮಿಸಿ ಸೂಕ್ತ ರಕ್ಷಣೆ ಒದಗಿಸಬೇಕೆಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೋಹಿನುದ್ದೀನಿ, ಗ್ರಾ.ಪಂ ಅಧ್ಯಕ್ಷ ವೀರೇಂದ್ರ ಹಾಗೂ ಟಿಎಇ ರಂಜಿತ್ ಅವರಿಗೆ ಸಹಾಯಕ ನಿರ್ದೇಶಕರು ನಿರ್ದೇಶನ ನೀಡಿದರು.
ಈ ಕೂಡಲೆ ಅಂಗನವಾಡಿ ಕೇಂದ್ರದ ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ವಹಿಸಬೇಕು ಮತ್ತು ಕಾಂಪೌಂಡ್ ನಿರ್ಮಿಸಬೇಕೆಂದರು