ಅಂಗನವಾಡಿ ಕಾರ್ಯಕರ್ತೆಯರ ಸಭೆ

ಕೆಂಭಾವಿ:ಎ.24:ಪಟ್ಟಣ ಸಮೀಪದ ಮಲ್ಲಾ (ಬಿ) ಹಾಗೂ ಯಾಳಗಿ ವಲಯದ ಅಂಗನವಾಡಿ ಕಾರ್ಯಕರ್ತೆಯರ ಸಭೆ ನಡೆಸಲಾಯಿತು.
ಸಭೆಯಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮಾತೃವಂದನಾ ಕಾರ್ಯಕ್ರಮದಡಿ ಗರ್ಭಿಣಿ ತಾಯಂದಿರಿಗೆ ಹೆರಿಗೆಯ ಮೊದಲು ಹಾಗೂ ನಂತರದ ವಿಶಾಂತ್ರಿಗಾಗಿ ಸಹಾಯಧನದ ರೂಪದಲ್ಲಿ 3 ಹಂತಗಳಲ್ಲಿ 5 ಸಾವಿರ ರೂಪಾಯಿಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಹಿಸಲಾಗುತ್ತಿರುವ ಹಣವು ಫಲಾನುಭವಿಗಳ ಖಾತೆಗೆ ಜಮಾ ಕುರಿತು ಎಸಿಡಿಪಿಒ ಮೀನಾಕ್ಷಿ ಪಾಟೀಲ್ ಅಂಗನವಾಡಿ ಕಾರ್ಯಕರ್ತೆಯರಿಂದ ಮಾಹಿತಿ ಪಡೆದು ನಂತರ ಮಲ್ಲಾ (ಬಿ) ವಲಯದ 51 ಹಾಗೂ ಯಾಳಗಿ ವಲಯದ 52 ಭಾಗ್ಯಲಕ್ಷ್ಮಿ ಬಾಂಡ್‍ಗಳನ್ನು ವಿತರಿಸಿ ಅಂಗನವಾಡಿ ಕಾರ್ಯಕರ್ತೆಯರಿಂದ ನೂತನ ಮಾತೃವಂದನಾ ಯೋಜನೆಗಾಗಿ ಸಲ್ಲಿಸಿದ ಅರ್ಜಿಗಳನ್ನು ಪಡೆದುಕೊಂಡರು.
ಸಭೆಯಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಮಕ್ಕಳು ಮತ್ತು ಮಹಿಳೆಯರ ತೂಕವನ್ನು ತಪಾಸಣೆ ಮಾಡಿಸಿ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಅಳತೆ ಮತ್ತು ತೂಕದ ಇಲಾಖೆಯ ಅಧಿಕಾರಿಗಳಾದ ವಿದ್ಯಾದರ ಪಾಟೀಲ್, ವಿಶ್ವನಾಥರೆಡ್ಡಿ, ಮಲ್ಲಾ (ಬಿ) ಹಾಗೂ ಯಾಳಗಿ ವಲಯದ ಮೇಲ್ವಿಚಾರಕಿ ಜಯಶ್ರೀ ದೊಡ್ಡಮನಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.