ಅಂಗನವಾಡಿ ಕಾರ್ಯಕರ್ತರ ಮೇಲೆ ಅತ್ಯಾಚಾರ – ಶಿಕ್ಷೆಗೆ ಆಗ್ರಹ


ರಾಯಚೂರು.೧೨.ಜ.ಉತ್ತರಪ್ರದೇಶದ ಬಂದವನು ಜಿಲ್ಲೆಯಲ್ಲಿ ಅಂಗನವಾಡಿ ಸಹಾಯಕಿ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಯುಪಿಎ ಸರ್ಕಾರವನ್ನು ವಜಾಗೊಳಿಸಲು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಿದರು.
ಅವರಿಂದು ನಗರದ ಟಿಪ್ಪುಸುಲ್ತಾನ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಸ್ಥಾನಿಕ ಕಚೇರಿ ಅಧಿಕಾರಿ ಮುಖಾಂತರ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಉತ್ತರ ಪ್ರದೇಶದ ಅತ್ರಾಸ್ ಘಟನೆಯ ನಂತರ ಮತ್ತೊಮ್ಮೆ ಜನತೆಯನ್ನು ಬೆಚ್ಚಿಬೀಳಿಸುವ ಪ್ರಕರಣ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಜರುಗಿದೆ. ೫೦ ವರ್ಷದ ಮಹಿಳೆ ಅಂಗನವಾಡಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಮಹಿಳೆಯ ಮೇಲೆ ಸಾಮೂಹಿಕ ಅತ್ಯಚಾರವೆಸಗಿ ಚಿತ್ರಹಿಂಸೆ ನೀಡಿ ಹತ್ಯಗೈದಿರುವ ಘಟನೆ ನಡೆದಿದೆ.ಧಾರ್ಮಿಕತೆ ಹೆಸರಿನಲ್ಲಿ ಮತ್ತು ಅದರ ಬಗ್ಗೆ ಹೆಮ್ಮೆ ಪಡುವ ದೇವಾಲಯಗಳೇ ಅಪರಾಧಿಗಳ ತಾಣಾವಾಗುತ್ತಿರುವುದು ಅರ್ಚಕರೇ ಅಪರಾಧಿಗಳಾಗುತ್ತಿರುವುದು ನಾಚಕಿಗೇಡಿನ ವಿಷಯವಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆಡಳಿತದಲ್ಲಿ ಪ್ರತಿನಿತ್ಯ ರಾಜ್ಯದಲ್ಲಿ ಮಹಿಳೆಯರ ಮೇಲೆ, ಬಾಲಕೀಯರ ಮೇಲೆ ಅತ್ಯಚಾರ ಕೊಲೆಗಳು ನಡೆಯುತ್ತಲೆ ಇವೆ. ಆರೋಪಿಗಳನ್ನು ರಕ್ಷಿಸಲು ಹೊರಟು ಎಫ್.ಐ.ಆರ್. ದಾಖಲಿಸಲು ಇಂದೇಟು ಹಾಕಿದ ಹಾಗೂ ಸಾರ್ವಜನಿಕರಿಗೆ ಮುಖ್ಯವಾಗಿ ಮಹಿಳೆಯರ ಮೇಲೆ ರಕ್ಷಣೆಗೆ ಕುರಿತು ಪ್ರತಿಭಟನೆಯ ಧ್ವನಿಯನ್ನು ಕೂಗಲು ಅವಕಾಶ ನೀಡದೇ ಹೋರಾಟಗಳನ್ನು ಹತ್ತಿಕ್ಕುತ್ತಿರುವ ಯೋಗಿ ಸರ್ಕಾರದ ನಡೆ ಅತ್ಯಂತ ಖಂಡನೀಯವಾಗಿದೆ ಈ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಹಾಗೂ
ಯೋಗಿ ಆದಿತ್ಯನಾಥ ಸರ್ಕಾರವನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆ.ಜಿ. ವೀರೇಶ್, ಎಚ್ ಪದ್ಮ, ಪಾರ್ವತಿ,ಗೋಕಾರಮ್ಮ,ಚಿಟ್ಟಿದೇವಿ,ಅಂಜಿನಮ್ಮ,ನಿರ್ಮಲ,ಗಂಗಮ್ಮ, ರಹೇಮತ್,ಸುಜಾತಾ,ಕಸ್ತೂರಿ, ಶರಣಮ್ಮ, ಖಾಜಮ್ಮ,ನಾಗಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.