ಅಂಗನವಾಡಿ ಕಾರ್ಯಕರ್ತರ ಗೌರವಧನ ಹೆಚ್ಚಿಸಲು ಒತ್ತಾಯ; ಪ್ರತಿಭಟನೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಫೆ.೨೮; ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಗೌರವಧನವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿ ಎಐಟಿಯುಸಿ ಪದಾಧಿಕಾರಿಗಳು ನಗರದ ಜಯದೇವ ವೃತ್ತದಲ್ಲಿ‌ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಕಾರ್ಮಿಕ ಮುಖಂಡ ಹೆಚ್ ಜಿ ಉಮೇಶ್ ಪ್ರಸ್ತುತ 2024-25ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಾಗಿದ್ದು ಮುಖ್ಯಮಂತ್ರಿ  ಸಿದ್ದರಾಮಯ್ಯನವರು ಉತ್ತಮವಾದ ಆಯ-ವ್ಯಯ ಮಂಡಿಸಿದ್ದಾರೆ. ಕಳೆದ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರ ರವರು 6ನೇ ಗ್ಯಾರಂಟಿಯಾಗಿ ಭರವಸೆ ನೀಡಿದ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ರೂ:15,000- ಹಾಗೂ: ಸಹಾಯಕಿಯರಿಗೆ ಗೌರವಧನ ರೂ:10.000 ಕ್ಕೆ ಹೆಚ್ಚಿಸುವ ಹಾಗೂ ನಿವೃತ್ತರಿಗೆ ರೂ:3 ಲಕ್ಷ ಇಡುಗಂಟು ನೀಡುವ ಭರವಸೆಯನ್ನು ಜಾರಿ ಮಾಡಿರುವುದಿಲ್ಲ ಆದ್ದರಿಂದ  ಮುಖ್ಯಮಂತ್ರಿಗಳು ಗೌರವ ಧನ ಹೆಚ್ಚಿಸಬೇಕೆಂದು ಮನವಿ ಮಾಡಿದರು.ಪ್ರತಿಭಟನೆಯಲ್ಲಿ ಎಂ.ಬಿ ಶಾರದಮ್ಮ,ಎಸ್ ಎಸ್ ಮಲ್ಲಮ್ಮ,ವಿಶಾಲಾಕ್ಷಿ,ಕೆ.ಸಿ‌ನಿರ್ಮಲ,ಗೀತಾ,ಸುಧಾ,ಕೇಣುಕಾ,ಆವರಗೆರೆ ವಾಸು ಮತ್ತಿತರರಿದ್ದರು.