ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಕ್ರಮ-ಅಬ್ಬಯ್ಯ

ಹುಬ್ಬಳ್ಳಿ,ಜ6: 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಮಂಜೂರಾದ 50 ಲಕ್ಷ ರೂ. ವೆಚ್ಚದಲ್ಲಿ ವಿವಿಧೆಡೆ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಮಂಗಳವಾರ ಭೂಮಿಪೂಜೆ ನೆರವೇರಿಸಿದರು.
ವಾರ್ಡ ನಂ. 63ರ ರಣದಮ್ಮ ಕಾಲನಿಯಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಕೈಗೊಂಡಿರುವ ತೆರೆದ ಚರಂಡಿ ಹಾಗೂ ವಾರ್ಡ ನಂ. 67ರ ಸೋನಿಯಾಗಾಂಧಿ ನಗರದಲ್ಲಿ ಕೈಗೊಂಡಿರುವ 20 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ಪೇವಿಂಗ್ ಸೇರಿದಂತೆ ಒಟ್ಟು 50 ಲಕ್ಷ ರೂ. ವೆಚ್ಚದ ಅಭಿವೃಧ್ಧಿ ಕಾಮಗಾರಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ರಣದಮ್ಮ ಕಾಲನಿಯಲ್ಲಿ ಈಗಾಗಲೇ ಲಕ್ಷಾಂತರ ರೂ. ವೆಚ್ಚದಲ್ಲಿ ತೆರೆದ ಚರಂಡಿ, ಸಮುದಾಯ ಭವನಗಳನ್ನು ನಿರ್ಮಿಸಿದ್ದು, ಕಾಲನಿಯ ಚಿತ್ರಣವೇ ಬದಲಾಗಿದೆ. ಪ್ರಮುಖ ಬೇಡಿಕೆಯಾದ ಹೊಸ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೂ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸೋನಿಯಾ ಗಾಂಧಿ ನಗರವನ್ನು ಕೋಟ್ಯಂತರ ರೂ. ಅನುದಾನದಲ್ಲಿ ಅಭಿವೃದ್ದಿಪಡಿಸಿದ್ದು, ಮೂಲ ಸೌಕರ್ಯಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ. ಅತ್ಯಂತ ಪ್ರಮುಖವಾದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಶೀಘ್ರ ಚಾಲನೆ ನೀಡಲಿದ್ದು, ಮಕ್ಕಳ ಸುರಕ್ಷತೆಗಾಗಿ ಅಂಗನವಾಡಿ ಕಟ್ಟಡದ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಶೀಘ್ರ ಕ್ರಿಯಾಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆ ಮಾಜಿ ಸದಸ್ಯರಾದ ಲಕ್ಷ್ಮೀಬಾಯಿ ಯಮನೂರು ಜಾಧವ್, ವಿಜನಗೌಡ ಪಾಟೀಲ, ಮೋಹನ ಅಸುಂಡಿ, ಮುಖಂಡರಾದ ನರಸಿಂಹ ಜೋಡಳ್ಳಿ, ಸುರೇಶ ಮಾನಶೆಟ್ಟರ್, ಸಂಕಣ್ಣ ಹೊನ್ನಳ್ಳಿ, ಈಶ್ವರ ಮಲ್ಲಾಪುರ, ಗಿರೀಶ ಮಾನಶೆಟ್ಟರ್, ರಾಕೇಶ ಪಲ್ಲಾಟೆ, ಬಾಗಣ್ಣ ಬಿರಾಜದಾರ, ಸತೀಶ, ಬಸಪ್ಪ ಕುಂದರಗಿ, ಯಲ್ಲಪ್ಪ, ಸಂತೋಷ ಕಾಂಬ್ಳೆ, ಸೈಯದ್ ಸಲೀಂ ಮುಲ್ಲಾ, ಮೆಹಬೂಬ್ ನಾಲಬಂದ, ಶರೀಫ್ ನದಾಫ್, ಅಲ್ತಾಫ್ ಮುಲ್ಲಾ, ಇತರರು ಇದ್ದರು.