ಅಂಗನವಾಡಿ ಕಟ್ಟಡ ಅಪಾಯಕ್ಕೆ ಆಹ್ವಾನ

ಕುಶಾಲನಗರ (ಕೂಡಿಗೆ): ಸೆ.14:- ಒಂದು ಕಡೆ ಉದುರಿ ಬಿದ್ದಿರುವ ಹೆಂಚುಗಳು ಬಿರುಕು ಬಿಟ್ಟ ಗೋಡೆ ಮುರಿದು ನೇತಾಡುತ್ತಿರುವ ಬಾಗಿಲು ಕಿಟಕಿಗಳು ದುರ್ವಾಸನೆ ಬೀರುವ ಶೌಚಾಲಯ. ಇದು ಕೊಡಗು ಜಿಲ್ಲೆಯ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದ ಅಂಗನವಾಡಿ ಕೇಂದ್ರದ ದುರವಸ್ಥೆ. ಇಲ್ಲಿ ಸಮಸ್ಯೆಗಳ ಭಂಡಾರವೇ ಇದೆ. ಆದರೆ ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಮಳೆಗೆ ಅಂಗನವಾಡಿ ಕಟ್ಟಡದ ಚಾವಣಿ ಉದುರಿ ಹೋಗಿದೆ.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ ದೊಡ್ಡತ್ತೂರು ಗ್ರಾಮದ ಅಂಗನವಾಡಿ ಕೇಂದ್ರವು ಕುಸಿದು ಬೀಳುವ ಸ್ಥಿತಿಯಲ್ಲಿದ್ದು ಪುಟ್ಟ ಕಂದಮ್ಮಗಳು ಹಾಗೂ ಅಂಗನವಾಡಿ ಸಹಾಯಕಿ ಭಯಭೀತಿಯಿಂದ ದಿನದೂಡುವಂತಹ ಪರಿಸ್ಥಿತಿ ಎದುರಾಗಿದೆ ಅಂಗನವಾಡಿ ಕೇಂದ್ರ ಕುಸಿದುಬೀಳಲು ಕಾಯುತ್ತಿದೆ ಅಂಗನವಾಡಿ ಕೇಂದ್ರದಲ್ಲಿ ಮುಗ್ಧ ಮಕ್ಕಳಿದ್ದಾರೆ ಈ ಅಂಗನವಾಡಿ ಕೇಂದ್ರ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಇಲ್ಲದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಇತ್ತ ನೋಡುತ್ತಲೇ ಇಲ್ಲ ಇದು ಅಂಗನವಾಡಿ ಎಂಬ ಪುಟ್ಟ ಮಕ್ಕಳ ಲೋಕದ ಬಗೆಗೆ ಅವರು ತಾಳಿರುವ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ.
ಭಯದಲ್ಲಿ ಮಕ್ಕಳು:
ಶಿಥಿಲ ಕಟ್ಟಡದ ಅಕ್ಕಪಕ್ಕದಲ್ಲಿ ಆಟವಾಡುತ್ತಾ ಇರುತ್ತಾರೆ ಕಟ್ಟಡವೇನಾದರೂ ಉರುಳಿಬಿದ್ದು ಮಕ್ಕಳಿಗೆ ಪ್ರಾಣಾಪಾಯವಾದರೆ ಯಾರು ಹೊಣೆ ಪ್ರತಿದಿನ ಮಕ್ಕಳು ಭಯದಲ್ಲೇ ಇರುವಂತಾಗಿದೆ ಎಂಬುದು ಇಲ್ಲಿಯ ಸಿಬ್ಬಂದಿ ಮತ್ತು ಪೆÇೀಷಕರ ಕಳವಳ.
ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹೊಸ ಕಟ್ಟಡ ನಿರ್ಮಿಸಿಕೊಡುವಂತೆ ಹತ್ತಾರು ಬಾರಿ ಮನವಿ ಕೊಟ್ಟರೂ ಸ್ಪಂದಿಸುವುದಿಲ್ಲ ಎಂದು ಕಿಡಿಕಾರುತ್ತಾರೆ ಮಕ್ಕಳು ಅಂಗನವಾಡಿ ಒಳಗೆ ಕುಳಿತುಕೊಳ್ಳದಂತೆ ಪರಿಸ್ಥಿತಿ ಇದ್ದು ಇದರಿಂದ ಪಾಲಕರು ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಮಳೆ ಬಂದಾಗ ಮಳೆ ನೀರು ಮುಂದಕ್ಕೆ ಹೋಗದೆ ಅಂಗನವಾಡಿಯ ಒಳಗಡೆ ಸೋರುತ್ತದೆ ಗೋಡೆಗಳು ಬಿರುಕು ಗೊಂಡಿವೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಈ ಕಟ್ಟಡವನ್ನು ದುರಸ್ತಿ ಮಾಡಿಕೊಡಿ ಎಂದು ಮನವಿ ಮಾಡಿದರೂ ಯಾರೂ ತಲೆಕೆಡಿಸಿಕೊಳ್ಳದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದೊಡ್ಡತ್ತೂರು ಅಂಗನವಾಡಿ ಇರುವ ಸ್ಥಿತಿಯನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಮ್ಮೆ ಈ ಅಂಗನವಾಡಿಯ ಸುತ್ತಲೂ ಕಣ್ಣು ಹಾಕಿ ಆಗ ತಿಳಿಯುತ್ತದೆ ಮಕ್ಕಳು ಯಾವ ಧೈರ್ಯದಿಂದ ಅಂಗನವಾಡಿ ಕೇಂದ್ರಕ್ಕೆ ಬರಬೇಕೆಂದು ತಕ್ಷಣ ಗಮನಹರಿಸಿ.
ಈ ಸಮಸ್ಯೆಯಿಂದ ಮಕ್ಕಳನ್ನು ಸುಗಮವಾಗಿ ಬರುವಂತೆ ಮಾಡಿ ಕೊಡಬೇಕು ಎಂದು ಈ ವ್ಯಾಪ್ತಿಯ ಗ್ರಾಮಸ್ಥರ ಆಗ್ರಹವಾಗಿದೆ.