ಅಂಗನವಾಡಿಯಲ್ಲಿ ಪಾಲಕರ ಸಭೆ

ಮುದ್ದೇಬಿಹಾಳ :ಸೆ.17: ಸರಕಾರ ಮಕ್ಕಳಿಗೆ ಸಿಗುವಂತಹ ಮೂಲ ಸೌಲಭ್ಯಗಳನ್ನು ಅಂಗನವಾಡಿ ಕೇಂದ್ರ ಹಂತದಲ್ಲಿಯೇ ಸಿಗುತ್ತವೆ, ಒಂದು ಮಗು ಅಂಗನವಾಡಿ ಕೇಂದ್ರಕ್ಕೆ ಬಂದು ಚಿಕ್ಕ ವಯಸ್ಸಿನಲ್ಲಿ , ಆಟ, ಪಠ್ಯೇತರ ಚಟುವಟಿಕೆಗಳ ಜೊತೆಗೆ ಬಹುತೇಕವಾಗಿ ಅಕ್ಷರ ಜ್ಞಾನವನ್ನು ಹೊಂದುತ್ತವೆ, ಆದರಿಂದ ಪಾಲಕರು ಅಂಗನವಾಡಿ ಶಿಕ್ಷಣದ ಕುರಿತು ತಮ್ಮ ಮಕ್ಕಳೊಂದಿಗೆ ಸೂಕ್ಷ್ಮವಾಗಿ ಸಮಾಲೋಚನೆ ಮಾಡಬೇಕೆಂದು ಅಂಗನವಾಡಿ ಕಾರ್ಯಕರ್ತೆ ಇಂದಿರಾ ಕುಂಬಾರ ಹೇಳಿದರು.
ತಾಲೂಕಿನ ಚವನಬಾವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಕಲಿಕೆಯ ಕುರಿತು ಶನಿವಾರ ನಡೆದ ಪಾಲಕರ ಸಭೆಯಲ್ಲಿ ಮಾತನಾಡಿದ ಅವರು , ಪ್ರತಿ ತಿಂಗಳು ಮೂರನೇ ಶನಿವಾರ ಸರಕಾರದ ಆದೇಶದಂತೆ ಪಾಲಕರ ಸಭೆ ನಡೆಸಬೇಕು, ಎಂದು ನಿಯಮ ಇದೆ, 3ರಿಂದ 6 ವರ್ಷದೋಳಗಿನ ಮಕ್ಕಳನ್ನು ತಪ್ಪದೆ ಅಂಗನವಾಡಿ ಕೇಂದ್ರಕ್ಕೆ ಕಳುಹಿಸಬೇಕು, ಆದರಿಂದ ಪಾಲಕರು ತಮ್ಮ ಮಕ್ಕಳದ ಬೌದ್ದಿಕ ಮಟ್ಟವನ್ನು ತಿಳಿದುಕೋಳ್ಳಲು, ಕಡ್ಡಾಯವಾಗಿ ಸಭಗೆ ಹಾಜರಿರಬೇಕು, ಮತ್ತು ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ತಪ್ಪದೇ ಕಳುಹಿಸಬೇಕು, ಇದರಿಂದಾಗಿ ಸರಕಾರದ ಯೋಜನೆಯೂ ಸಮರ್ಪಕವಾಗಿ ಈಡೇರಿದಂತಾಗುತ್ತದೆ ಎಂದರು.
ನಂತರ ಅಂಗನವಾಡಿ ಕಾರ್ಯಕರ್ತೆ ಶಾಂತಾ ಈಳಗೇರ ಮಾತನಾಡಿ, ಇಂದು ನಮ್ಮ ಮಕ್ಕಳ ಶಾಲಾ ಹಂತ ಪ್ರಾರಂಭವಾಗುವದು ಅಂಗನವಾಡಿ ಕೇಂದ್ರದಿಂದಲೇ, ನಾವುಗಳು ನಮ್ಮ ಮಕ್ಕಳನ್ನು ಶಿಕ್ಷಣವಂತರಾಗುವಲ್ಲಿ ಪ್ರಯತ್ನ ಪಡಬೇಕು, ಸರಕಾರದ ಯೋಜನೆಯನ್ನು ಉಪಯೋಗಪಡಿಸಿಕೋಳ್ಳಬೇಕು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಬಸಮ್ಮ ಕಾರಕೂರ, ಮಾಳವ್ವ ಬಿರಾದಾರ,ಲಕ್ಷ್ಮೀ ಕರಿಗಾರ, ಬಾಲವ್ವ ಬಿರಾದಾರ, ಸುಜಾತಾ ಸೋಮನಾಳ, ನೀಲಮ್ಮ ಕಾರಕೂರ, ಮಲ್ಲಮ್ಮ ನಾಲತವಾಡ, ಹಣಮಂತಿ ನಾಲತವಾಡ, ಗೌರಮ್ಮ ಮುರಾಳ, ಆಶಾ ಕಾರ್ಯಕರ್ತೆಯರಾದ ನೀಲಮ್ಮ ಪಾಟೀಲ್, ಅಂಗನವಾಡಿ ಸಹಾಯಕಿಯರಾದ ಗೌರಮ್ಮ ನಾಲತವಾಡ, ಶಾಂಭವಿ ಪಾಟೀಲ್ ಇನ್ನೀತರರು ಇದ್ದರು.