ಅಂಗನವಾಡಿಯಲ್ಲಿ ಕನಕದಾಸ ಜಯಂತೋತ್ಸವ ಆಚರಣೆ

ಚಿತ್ತಾಪುರ:ನ.28: ತಾಲೂಕಿನ ದಂಡೋತಿ ಅಂಗನವಾಡಿ ಕೇಂದ್ರದಲ್ಲಿ ಕನಕದಾಸರ ಜಯಂತೋತ್ಸವದ ನಿಮಿತ್ಯ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವುದರೊಂದಿಗೆ ಕನಕ ಜಯಂತೋತ್ಸವ ಆಚರಿಸಲಾಯಿತು. ಇದೇ ವೇಳೆ ಅಂಗನವಾಡಿ ಮಕ್ಕಳಿಗೆ ಕನಕದಾಸರ, ಬಸವಣ್ಣರ, ಅಕ್ಕಮಹಾದೇವಿಯ, ಹೀಗೆ ಅನೇಕ ಮಹಾಪುರುಷರ ವೇಷಧಾರಿಗಳನ್ನು ಮಾಡಿ ಜಯಂತೋತ್ಸವ ಆಚರಣೆ ಮಾಡಿರುವುದು ವಿನೂತನವಾಗಿ ಕಂಡುಬಂದಿತ್ತು.

ಈ ಸಂದರ್ಭದಲ್ಲಿ ಅಧ್ಯಕ್ಷರು ಇಸಾಕ್ ಯಾದಗೀರ್, ಶಿವಕುಮಾರ್ ಪಾಳೆದ, ಪ್ರಕಾಶ್ ಯಾದಗೀರ್, ವೀರಣ್ಣ ಕುರಗುಂಟಿ, ಮಲ್ಲಿಕಾರ್ಜುನ್ ಕೊಳ್ಳಿ, ರಮೇಶ್ ಕವಡೆ ಅಂಗನವಾಡಿ ಕಾರ್ಯಕರ್ತೆ ವಿದ್ಯಾನಿಧಿ, ಸಹಾಯಕಿಯರಾದ ಲಕ್ಷ್ಮಿ, ಶಬನಾಬಿ, ಇದ್ದರು.