ಅಂಗನವಾಡಿಯಲ್ಲಿ ಆಟದೊಂದಿಗೆ ಪಾಠ

ಚಿತ್ತಾಪುರ:ಸೆ.10: ಮಕ್ಕಳಲ್ಲಿನಾ ಕಲಿಕೆಯ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಟದೊಂದಿಗೆ ಪಾಠ ಎಂಬ ವಿಷಯದ ಮೇಲೆ ಕಾರ್ಯಕ್ರಮ ನಡೆಯಿತು.

ತಾಲ್ಲೂಕಿನ ದಂಡೋತಿ ಗ್ರಾಮದ ಅಂಗನವಾಡಿ ಕೇಂದ್ರ-5ರ ವತಿಯಿಂದ ರಾಷ್ಟ್ರೀಯ ಫೆÇೀಷಣ ವಾಟಿಕ ಕಾರ್ಯಕ್ರಮದ ಅಡಿಯಲ್ಲಿ ಪಾಠದ ಆಟಿಕೆ ಸಾಮಾನುಗಳನ್ನು ತೆಗೆದುಕೊಂಡು ಹಾಗೂ ಸಮುದಾಯ ಸಹಭಾಗಿತ್ವದ ಅಡಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಗ್ರಾಮದಲ್ಲಿ ನಡೆಯುವ ಸಂತೆಯ ಮಾದರಿಯಂತೆ ಅಂಗನವಾಡಿ ಕೇಂದ್ರದ ಮಕ್ಕಳಿಂದ ಸಂತೆಯನ್ನು ಆಯೋಜಿಸಿದರು.

ಮಕ್ಕಳು ಆಯೋಜಿಸಿದ ಸಂತೆಗೆ ಜನರು ಬಂದು ವ್ಯಾಪಾರ ಮಾಡಿದರು ಮಕ್ಕಳು ಖುಷಿಯಿಂದ ವ್ಯಾಪಾರ ಮಾಡುತ್ತಿರುವ ದೃಶ್ಯ ಕಂಡು ಬಂದಿತ್ತು.

ಅಂಗನವಾಡಿ ಕಾರ್ಯಕರ್ತೆ ವಿಧ್ಯಾನಿದಿ ಸಹಾಯಕ ಕಾರ್ಯಕರ್ತ ಹಾಗೂ ಇತರರು ಇದ್ದರು.