ಅಂಗನವಾಡಿಗಳಿಗೆ ಶುದ್ಧ ನೀರು ಕೊಡಿ: ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರು

ಯಾದಗಿರಿ: ಡಿ.4:ಶಹಾಪೂರ ತಾಲ್ಲೂಕಿನ ಅಂಗನವಾಡಿಗಳಲ್ಲಿ 395 ಅಂಗನವಾಡಿಗಳಿದ್ದು, ಇವುಗಳಲ್ಲಿ ಮಕ್ಕಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕಡ್ಡಾಯವಾಗಿ ಶುದ್ಧ ಕುಡಿವ ನೀರು ವ್ಯವಸ್ಥೆ ಮಾಡುವಂತೆ ಡಾ|| ಸರ್. ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘ ಮನವಿ ಮಾಡಿದೆ.

ಈ ಕುರಿತು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂಘದ ಕಾರ್ಯಕರ್ತರು ಈಗಾಗಲೇ ಕೊರೊನಾ ಸಾಂಕ್ರಾಮಿಕ ಮತ್ತು ಡೆಂಗ್ಯೂ ಸೇರಿದಂತೆ ಭಾರಿ ಸಮಸ್ಯೆ ಗಳು ವೈರಸ್ ಗಳು ಹರಡುತ್ತಿವೆ. ಈ ಮದ್ಯೆ ಅಂಗನವಾಡಿಗಳಲ್ಲಿ ಬೋರವೆಲ್ ಮತ್ತು ನಳದ, ಕೆರೆಯ ಬಾವಿ ನೀರು ಕುಡಿಸುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗುವ ಸಾದ್ಯತೆ ಇದೆ.

ಆರೋಗ್ಯ ಭಾಗ್ಯ ಹೇಳಿಕೆಯಂತೆ ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ನೀರಿನ ಪಾತ್ರ ಪ್ರಮುಖವಾಗಿದ್ದು, ನೀರು ಕಲುಷಿತವಾಗಿದ್ದರೆ ನಾನಾ ರೋಗಗಳು ಹರಡುವ ಸಾಧ್ಯತೆ ಇದೆ. ವಿಶೇಷವಾಗಿ ಆನೆಕಾಲು ಸೇರಿದಂತೆ ಬೇರೆ ಬೇರೆ ಕಾಲುಗಳ ನೀರಿನ ರೋಗಗಳು ಹರಡುತ್ತಿವೆ.

ಇಂತಹ ವೇಳೆ ಮಕ್ಕಳು ಬಾಯಾರಿಕೆಯಾದಾಗ ತಿಂಡಿಯನ್ನು ತಿನ್ನುವಾಗ ಏನನ್ನು ಗಮನಿಸದೇ ಲಭ್ಯವಿರುವ ನೀರನ್ನು ಕುಡಿವ ಪರಿಸ್ಥಿತಿ ಮಕ್ಕಳಿಗೆ ಇದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ 395 ಅಂಗನವಾಡಿ ಕೇಂದ್ರಗಳ ಪೈಕಿ ಬಹುತೇಕ ಕೇಂದ್ರಗಳಲ್ಲಿ ನೀರಿನ ಗಂಭೀರ ಪರಿಸ್ಥಿತಿ ಇದೆ.

ಆದ್ದರಿಂದ ಕೂಡಲೇ ಕ್ರಮ ಕೈಗೊಂಡು ಶುದ್ಧ ಹಾಗೂ ಆರೋಗ್ಯಕರವಾದ ನೀರು ಒದಗಿಸಬೇಕೆಂದು ಒತ್ತಾಯಿಸಿದರು.

ಅಧ್ಯಕ್ಷ ಪ್ರದೀಪ ಅಣಬಿ ಮನವಿ ಸಲ್ಲಿಸಿದರು, ಹಣಮಂತ ವಡಗೇರಿ, ಸುನಿಲ್ ಹಳಿಸಗರ, ಖಾಸಿಮ್ ಮೇಸ್ತ್ರಿ, ಶಾಪುರ, ಅಂಬ್ರೇಷ್ ಸಿರವಾಳ, ಸಿವು ದೇವಪುರ, ಭೀಮರಾಯ ಯಕ್ಷಿಂತಿ, ಲಕ್ಷ್ಮಣ ಹಳಿಸಗರ ಇನಿತರರು ಇದ್ದರು.