ಅಂಗಡಿ ವ್ಯಾಪಾರ ಬಂದ್: ವ್ಯಾಪಾರಸ್ಥರು ಕಂಗಾಲು


ಗುಳೇದಗುಡ್ಡ,ಎ.25:ಕೋವಿಡ್ 2ನೇ ಅಲೆ ದಿನದಿಂದ ದಿನಕ್ಕೆ ಸೋಂಕಿತರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲ್ಲೂಕ ಆಡಳಿತ ಹಾಗೂ ಪೊಲೀಸ್ ಇಲಾಖೆ ರಸ್ತೆಗಿಳಿದು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಅಂಗಡಿ, ಮುಗ್ಗಟ್ಟುಗಳನ್ನು ಶನಿವಾರ ಬಂದ್ ಮಾಡಿಸಿದರು.
ಈ ವೇಳೆಯಲ್ಲಿ ತಹಶೀಲ್ದಾರ್ ಜಿ.ಎಂ. ಕುಲಕರ್ಣಿ ಮಾತನಾಡಿದ ಅವರು. ಸರ್ಕಾರದ ಆದೇಶದ ಮೇರೆಗೆ ಮೇ. 4 ರ ವರೆಗೆ ವೀಕೆಂಡ್ ಲಾಕ್ ಡೌನ್ ವಾರಾಂತ್ಯ ಕಪ್ರ್ಯೊ ಜಾರಿಯಲ್ಲಿದೆ. ಸಾರ್ವಜನಿಕರ ಅಗತ್ಯ ವಸ್ತುಗಳಿಗೆ ಬೆಳಿಗ್ಗೆ 6 ರಿಂದ 10 ವರೆಗೆ ಅವಕಾಶ ಕಲ್ಪಿಸಿದೆ. ಹಾಲು, ಹಣ್ಣು, ಆಸ್ಪತ್ರೆ, ಔಷಧಿಗಳಿಗೆ ಅವಕಾಶ ನೀಡಿದೆ. ಮಧ್ಯದಂಗಡಿ, ಹೋಟೆಕಲ್‍ಗಳಲ್ಲಿ ಪಾರ್ಶಲ್‍ಗೆ ಅವಕಾಶವಿದೆ. ಸಾರ್ವಜನಿಕರು ಸರ್ಕಾರಿ ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದರು ಪಟ್ಟಣದಲ್ಲಿ ಪುರಸಭೆ ಮುಖ್ಯಾಧಿಕಾರಿ ಚಿದಾನಂದ ಮಠಪತಿ, ಗ್ರಾಮ ಪಂಚಾಯತ್‍ಗಳಲ್ಲಿ ಪಿಡಿಒ ನೇತೃತ್ವದಲ್ಲಿ ಕೋವಿಡ್ ಮಾರ್ಷಲ್ ಪಡೆ ತಂಡ ರಚಿಸ ಲಾಗಿದೆ. ಕೋವಿಡ್ ತಂಡದ ಸದಸ್ಯರು ಮದುವೆ ಮಂಟಪದಲ್ಲಿ 50 ಕ್ಕಿಂತ ಹೆಚ್ಚು ಜನರು ಹಾಗೂ ಶವ ಸಂಸ್ಕಾರಕ್ಕೆ 20 ಕ್ಕಿಂತ ಹೆಚ್ಚು ಜನರು ಸೇರ ದಂತೆ ಜಾಗೃತಿ ವಹಿಸುವ ಮೂಲಕ ಕೊರೋನಾ 2ನೇ ಅಲೆ ಹಬ್ಬದಂತೆ ಜನರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಕಡ್ಡಾಯವಾಗಿ ಮಾಸ್ಕ ಧರಿಸುವಂತೆ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾಗೃತಿ ಮೂಡಿ ಸುವ ಕಾರ್ಯದಲ್ಲಿ ತೊಡಗಿದ್ದಾರೆಂದು ಹೇಳಿದರು.
ಈ ವೇಳೆ ಭಾರತ ತರಕಾರಿ ಮಾರುಕಟ್ಟೆ, ಹೊಸಪೇಟೆ ಮಾರುಕಟ್ಟೆ, ಸರಾಫ್ ಬಜಾರ, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ, ಗುಗ್ಗರಿಪೇಟೆ, ಪುರಸಭೆ, ಪವಾರ ಕ್ರಾಸ್, ರಜಂಗಳಪೇಟೆ, ಹರದೊಳ್ಳಿ, ಸಾಲೇಶ್ವರಯಲ್ಲಿನ ಎಲ್ಲ ಅಂಗಡಿ, ಮುಗ್ಗಟ್ಟುಗಳನ್ನು ಬಂದ್ ಮಾಡಿಸಿರುವುದಕ್ಕೆ ವ್ಯಾಪಾರಸ್ಥರು ಅಸಮಾದಾನ ಹೊರ ಹಾಕಿದರು. ಎಂದಿನಂತೆ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚರಿಸಿದವು. ಪಟ್ಟಣದ ಎಲ್ಲ ಅಂಗಡಿ, ಮುಗ್ಗಟ್ಟುಗಳು ಬಂದ್ ಆಗಿದ್ದವು. ರಸ್ತೆಯಲ್ಲಿ ಜನರ ಸಂಚಾರ ಇಲ್ಲದ ಕಾರಣ ಜನದಟ್ಟಣೆ ಇರುವ ಭಾರತ ಮಾರುಕಟ್ಟೆ, ಹೊಸಪೇಟೆ ಮಾರುಕಟ್ಟೆ ರಸ್ತೆ ಸೇರಿದಂತೆ ಪಟ್ಟಣದ ಎಲ್ಲ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಈ ಸಂದರ್ಭದಲ್ಲಿ ಬಾದಾಮಿ ಸಿಪಿಐ ರಮೇಶ ಹಣಾಪೂರ, ಪುರಸಭೆ ಮುಖ್ಯಾಧಿಕಾರಿ ಚಿದಾನಂದ ಸಿ. ಮಠಪತಿ, ಪಿಎಸ್‍ಐ ಪುಂಡಲೀಕ ಪಟಾತರ, ಎಂ.ಆರ್. ಸುಗಂದಿ, ಪುರಸಭೆ, ಪೊಲೀಸ್ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.