
ಬಾಗಲಕೋಟೆ,ಆ.3 : ಕಾರ್ಮಿಕ ನಿರೀಕ್ಷಕರ ಕಚೇರಿ ಬಾಗಲಕೋಟೆ ವೃತ್ತದಲ್ಲಿ ನೊಂದಣಿಯಾಗಿರುವ ಬಾಗಲಕೋಟೆ ಮತ್ತು ಬೀಳಗಿ ತಾಲೂಕಿನ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ಹೊರತುಪಡಿಸಿ, ನೋಂದಣಿಯಾಗದಿರುವ ಅಂಗಡಿ ಮತ್ತು ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು 15 ದಿನಗಳ ಒಳಗಾಗಿ ನೊಂದಾಯಿಸುವಂತೆ ಬಾಗಲಕೋಟೆ ವೃತ್ತದ ಕಾರ್ಮಿಕ ನಿರೀಕ್ಷಕ ರಮೇಶ ಸಿಂದಗಿ ತಿಳಿಸಿದ್ದಾರೆ.
ನೊಂದಣಿಗಾಗಿ ಕರ್ನಾಟಕ ಸರಕಾರದ ಇ-ಕಾರ್ಮಿಕ ತಂತ್ರಾಂಶ ಮೂಲಕ ಶುಲ್ಕ ಮತ್ತು ಅವಶ್ಯಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಕಡ್ಡಾಯವಾಗಿ ಅರ್ಜಿ ಸಲ್ಲಿಸಿ ಸಂಸ್ಥೆಗಳ ನೊಂದಣಿ ಪತ್ರ ಪಡೆಯಬೇಕು. ಅಲ್ಲದೇ ತಮ್ಮ ಸಂಸ್ಥೆಯಲ್ಲಿ ಕೆಲಸಗಾರರು ಇಲ್ಲದಿದ್ದರೂ ಸಹ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961 ಕಲಂ, 4(1) ಮತ್ತು (3) ಹಾಗೂ ನಿಯಮ 3ರ ಮೇರೆಗೆ ಸಂಸ್ಥೆಯನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ನೊಂದಣಿ ಮಾಡಿಸಿಕೊಳ್ಳುವಲ್ಲಿ ತಪ್ಪಿದ ಸಂಸ್ಥೆಯ ಮಾಲಿಕರ ವಿರುದ್ದ ಕಾನೂನು ಪ್ರಕಾರ ಕ್ರಮಜರುಗಿಸಲಾಗುತ್ತಿದೆ ಎಂದು ಕಾರ್ಮಿಕ ನಿರೀಕ್ಷಕರು ತಿಳಿಸಿದ್ದಾರೆ.