ಅಂಗಡಿ ಬೆಂಕಿಗಾಹುತಿ: ಭಾರೀ ನಷ್ಟ

ಮಂಗಳೂರು, ಮೇ ೩೧- ತೊಕ್ಕೊಟ್ಟು ಆಟೋ ಸ್ಪೇರ್ ಪಾರ್ಟ್ಸ್ ಅಂಗಡಿಯೊಂದು ಬೆಂಕಿಗೆ ಆಹುತಿಯಾಗಿರುವ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಇಂದು ಬೆಳಗ್ಗೆ (ಸೋಮವಾರ) ಸಂಭವಿಸಿದೆ.

ಓವರ್ ಬ್ರಿಡ್ಜ್ ಬಳಿಯಿರುವ ಗೋಲ್ಡನ್ ಸ್ಪೇರ್ ಪಾರ್ಟ್ಸ್ ಅಂಗಡಿಯಲ್ಲಿ ಅವಘಢ ಸಂಭವಿಸಿದ್ದು, ಮುಚ್ಚಿದ್ದ ಅಂಗಡಿಯಲ್ಲಿ ದಟ್ಟವಾಗಿ ಹೊಗೆ ಆವರಿಸಿರುವುದನ್ನು ಕಂಡ ಸ್ಥಳೀಯರು ಶಟರ್ ತೆರೆದು ನೋಡಿದಾಗ ಬೆಂಕಿ ತಗಲಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರು ಸೇರಿ ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಬೆಂಕಿ ಅಂಗಡಿಗೆ ಸಂಪೂರ್ಣ ವ್ಯಾಪಿಸಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಅಗ್ನಿ ಶಾಮಕ ದಳ ಸ್ಥಳಕ್ಕಾಗಮಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಆದರೂ ಭಾರೀ ನಷ್ಟ ಸಂಭವಿಸಿದೆ ಎನ್ನಲಾಗಿದೆ.