ಅಂಗಡಿ ತೆರವು ಕಾರ್ಯಕ್ಕೆ ಮುಂದಾದ  ಪುರಸಭೆ ಅಧಿಕಾರಿಗಳು.

ಹರಪನಹಳ್ಳಿ.ನ.೧೬: ಪಟ್ಟಣದ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಪೆಟ್ರೋಲ್ ಬಂಕ್ ನಿಂದ ಇಲ್ಲಿನ ಬಸ್ ನಿಲ್ದಾಣಕ್ಕೆ ಆಗಮನ ಹಾಗೂ ನಿರ್ಗಮನ ವಾಹನ ದಟ್ಟಣದಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಹಲವಾರು ಬಾರಿ ಪೆಟ್ರೋಲ್ ಬಂಕ್ ವಾಹನ ದಟ್ಟಣೆಯಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಇಂದು ಪುರಸಭೆ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ರಸ್ತೆ ಬದಿಯಲ್ಲಿ ಅಕ್ರಮವಾಗಿ ಇಟ್ಟಿದ್ದ ಪೆಟ್ಟಿಗೆ ಅಂಗಡಿ ಹಾಗೂ ಫುಟ್ಪಾತ್ ಅಂಗಡಿಗಳನ್ನು ತೆರವುಗೊಳಿಸಿದರು.ಈ ಸಂದರ್ಭದಲ್ಲಿ ಮಾಧ್ಯಮದವರ ಜೋತೆಗೆ ಮಾತನಾಡಿದ ಪುರಸಭೆ ಅಧ್ಯಕ್ಷ ಹಾರಳು ಅಶೋಕ ಮಾತನಾಡಿ ಪಟ್ಟಣದಲ್ಲಿ ಜನಸಂಖ್ಯೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಪೆಟ್ರೋಲ್ ಬಂಕ್ ಹಾಗೂ ಅಂಗಡಿ ಮುಗ್ಗಟ್ಟಿನಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು ಹಾಗಾಗಿ ಇಂದು ಈ ತೆರವು ಕಾರ್ಯ ಮಾಡಲಾಯಿತು ಎಂದು ಅವರು ಹೇಳಿದರು.ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ಮಂಜುನಾಥ್ ಮಾತನಾಡಿ ಹರಪನಹಳ್ಳಿ ಪಟ್ಟಣದಲ್ಲಿನ ಹೊಸ ಬಸ್ ನಿಲ್ದಾಣಕ್ಕೆ ಹೊಂದಿಕೊAಡಿರುವ ಪೆಟ್ರೋಲ್ ಬಂಕ್ ಮಾಲಿಕರಿಗೆ ಹಲವಾರು ಬಾರಿ ನೋಟೀಸ್ ನೀಡಲಾಗಿತ್ತು ಆದರೆ ಅವರು ಅದನ್ನು ತಿರಸ್ಕರಿಸಿ ನ್ಯಾಯಾಲಯದ ಮೊರೆ ಹೊಗಿದದ್ದರು ಅಲ್ಲಿ ನ್ಯಾಯಲಯವು ಅವರ ರಿಟ್ ಅರ್ಜಿ ತಿರಸ್ಕರಿಸಿದೆ ಹಾಗಾಗಿ ಇಲ್ಲಿನ ಜನ ದಟ್ಟಣೆ ನಿಯಂತ್ರಣ ಹಾಗೂ ಬಸ್ ನಿಲ್ದಾಣದ ಆಗಮನ ಹಾಗೂ ನಿರ್ಗಮನ ದ್ವಾರ ಬಾಗಿಲು ಅಗಲಿಕರಣ ಮಾಡಬೇಕಿದೆ ಜೋತೆಗೆ ಇಲ್ಲಿ ಹಲವಾರು ಬಾರಿ ಅಪಘಾತ ಸಂಭವಿಸಿದೆ ಹಾಗಾಗಿ ಈ ಪೆಟ್ರೋಲ್ ಬಂಕ್ ತೆರವು ಹಾಗೂ ಬಸ್ ನಿಲ್ದಾಣಕ್ಕೆ ಹೊಂದಿಕೊAಡ ಅಂಗಡಿ ಮುಗ್ಗಟ್ಟು ತರೆವು ಕಾರ್ಯ ಅನಿವಾರ್ಯ ಎಂದು ಅವರು ಹೇಳಿದರು.ಇದೇ ವೇಳೆಗೆ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಜೆಸಿಬಿ ಜತೆಗೆ ಬಂದಿರುವುದನ್ನು ಅರಿತ ಕೆಲ ಹೂವಿನ ಅಂಗಡಿ, ಟೀ ಅಂಗಡಿ ಮಾಲಿಕರು ಸ್ವಯಂ ಪ್ರೇರಿತರಾಗಿ ತೆರವಿಗೆ ಮುಂದಾದರು. ತಾವು ಅಂಗಡಿಗೆ ಹಾಕಿಕೊಂಡಿದ್ದ ಶೀಟ್, ಚಪ್ಪರ, ಟಾರ್ಪಲ್, ಅಂಗಡಿ ಮುಂದೆ ಹಾಕಿದ್ದ ನಾಮಫಲಕ ಮತ್ತಿತರ ವಸ್ತುಗಳನ್ನು ತೆಗೆದುಕೊಂಡರು.