ಅಂಗಡಿ ತೆಗೆದವರಿಗೆ- ಮಾಸ್ಕ್ ಧರಿಸದವರಿಗೆ ದಂಡ

ಸಿರವಾರ.ಮೇ.೩-ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಿದರೂ, ಬಟ್ಟೆ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದಾಗ ಪ.ಪಂಚಾಯತಿ ಸಿಬ್ಬಂದಿಗಳು ದಾಳಿ ಮಾಡಿ ದಂಡ ವಸೂಲಿ ಮಾಡಿದ್ದಾರೆ. ಪಟ್ಟಣ ಪಂಚಾಯತಿ ಮುಂಭಾಗದಲ್ಲಿ ಮಾಸ್ಕ್ ಧರಿಸದೆ ಓಡಾಡುವ ಜನರನ್ನು, ವಾಹನ ಸವಾರರನ್ಮು ತಡೆದು ದಂಡ ವಿದಿಸುತ್ತಿರುವುದು ಸಾಮಾನ್ಯವಾಗಿತು. ತರಕಾರಿ ಹಾಲು, ಹಣ್ಣು ಅಂಗಡಿಗಳಿಗೆ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿತು. ಆದರೆ ಕೇಲ ಬಟ್ಟೆಅಂಗಡಿಗಳು ತೆರೆದು ಗ್ರಾಹಕರನ್ನು ಒಳಗಡೆ ಬಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೆರೆಗೆ ದಾಳಿ ಮಾಡಿ ಪ್ರಕರಣ ದಾಖಲು ಮಾಡಿದ್ದಾರೆ. ಮಾಸ್ಕ್ ಇಲ್ಲದೆ ರಸ್ತೆಯಲ್ಲಿ ಅನಗತ್ಯವಾಗಿ ಓಡಾಡುತ್ರಿರುವ ವಾಹನಗಳನ್ನು ತಡೆದು ೧೦೦ ರೂ ದಂಡ ಹಾಕಿಸಿಕೋಂಡಿದ್ದಾರೆ.