ಅಂಗಡಿಗೆ ನುಗ್ಗಿದ ಕಾರ್: ಅಂಗಡಿ ಮಾಲಕ ಪಾರು


ಕಾಸರಗೋಡು, ನ.೨- ಚಾಲಕನ ನಿಯಂತ್ರಣ ತಪ್ಪಿದ ಕಾರು ಅಂಗಡಿಯೊಳಗೆ ನುಗ್ಗಿದ ಘಟನೆ ನ.೧ರ ಭಾನುವಾರದಂದು ಮಧ್ಯಾಹ್ನ ಮಂಜೇಶ್ವರ ಸಮೀಪದ ಕುಂಜತ್ತೂರು ಪದವಿನಲ್ಲಿ ನಡೆದಿದೆ.
ಅದೃಷ್ಟವಶಾತ್ ಈ ವೇಳೆ ಅಂಗಡಿ ಮಾಲಕ ಅಪಾಯದಿಂದ ಪಾರಾಗಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಭಾರೀ ಹಾನಿ ಉಂಟಾಗಿದೆ.


ಕುಂಜತ್ತೂರು ಪದವು ತಿರುವಿನಲ್ಲಿ ನಿಯಂತ್ರಣ ತಪ್ಪಿದ ಕಾರು ಅಂಗಡಿ ಮುಂಭಾಗದಲ್ಲಿ ನಿಲ್ಲಿಸಿದ್ದ ಬುಲೆಟ್ ಬೈಕ್ ಹಾಗೂ ವಿದ್ಯುತ್ ಕಂಬಕ್ಕೆ ಬಡಿದು ಅಂಗಡಿಗೆ ನುಗ್ಗಿದೆ. ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಕೇಸು ದಾಖಲಿಸಿಕೊಂಡಿದ್ದಾರೆ.