ಅಂಗಡಿಗಳ ಮೇಲೆ ದಾಳಿ,ಪ್ಲಾಸ್ಟಿಕ್ ವಶ


ಸಿರುಗುಪ್ಪ : ಪರಿಸರ ಹಾನಿಗೆ ಕಾರಣವಾಗುವ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದರೂ ನಗರದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆ ನಿಂತಿಲ್ಲ. ಇದನ್ನರಿತ  ಸಿರುಗುಪ್ಪ ನಗರಸಭೆ ಅಧಿಕಾರಿಗಳು ಅಂಗಡಿಗಳ ಮೇಲೆ ದಾಳಿ ಮಾಡಿ ವ್ಯಾಪಾರಸ್ಥರಿಗೆ ದಂಡ ಹಾಕಿದ್ದಾರೆ.
ನಗರ ವ್ಯಾಪ್ತಿಯ ವ್ಯಾಪಾರ ಮಳಿಗೆಗಳು, ರಸ್ತೆ ಬದಿ ವ್ಯಾಪಾರಸ್ಥರು, ಎಗ್ರೈಸ್ ಅಂಗಡಿಗಳು, ಹೋಟೆಲ್ಗಳ ಮೇಲೆ ದಾಳಿ ಮಾಡಿದ ನಗರಸಭೆ ಜಾಗೃತ ತಂಡ ಸುಮಾರು 1ಕ್ವಿಂಟಲ್ 50 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದು ಅಲ್ಲದೆ ವ್ಯಾಪಾರಸ್ಥರಿಗೆ 2 ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ನಗರದ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದ್ದು ವ್ಯಾಪಾರಸ್ಥರು ಪ್ಲಾಸ್ಟಿಕ್ ಬಳಕೆ ಮಾಡಿದರೆ ದಂಡ ಕೊಡಬೇಕಾಗುತ್ತದೆ ಎಂದು ಹಿರಿಯ ಆರೋಗ್ಯ ನಿರೀಕ್ಷ ರಂಗಸ್ವಾಮಿ ಎಚ್ಚರಿಸಿದರು.
ಆರೋಗ್ಯ ನಿರೀಕ್ಷಕಿ ಸ್ವರ್ಣಲತಾ, ಸಿಬ್ಬಂದಿಗಳಾದ ಕೆ.ವೀರೇಶ, ಯೋಗರಾಜ, ಹುಲುಗಪ್ಪ, ವಿನಯಕುಮಾರ್, ಖಾಲಿಲಾ, ಎಂ.ಮಲ್ಲಿಕಾರ್ಜುನ, ಕೆ.ಮಲ್ಲಿಕಾರ್ಜುನ, ಕೆ.ನಾಗರಾಜ, ಸೋಮಶೇಖರ, ಭೀಮದಾತ್, ಪಾಲ್ಗೊಂಡಿದ್ದರು.

One attachment • Scanned by Gmail