ಅಂಗಡಿಗಳ ಮೇಲೆ ಕನ್ನಡ ನಾಮ ಫಲಕ ಕಡ್ಡಾಯ : ಘಾಟೆ

(ಸಂಜೆವಾಣಿ ವಾರ್ತೆ)
ಔರಾದ್ :ಅ.28: ಪಟ್ಟಣ ವ್ಯಾಪ್ತಿಯ ಅಂಗಡಿಗಳ ನಾಮಫಲಕ (ಬೋರ್ಡ್)ಗಳನ್ನು ಕಡ್ಡಾಯವಾಗಿ ಮೇಲ್ಭಾಗದಲ್ಲಿ ಮೊದಲ ಆದ್ಯತೆ ನೀಡಿ ಕನ್ನಡದ ದೊಡ್ಡ ಅಕ್ಷರಗಳಲ್ಲಿ ಬರೆಯುವಂತೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಶಿವಕುಮಾರ ಘಾಟೆ ಆದೇಶಿಸಿದ್ದಾರೆ.
ಪಟ್ಟಣದ ಎಲ್ಲ ಅಂಗಡಿಗಳ ನಾಮಫಲಕಗಳು ಮೂರು ದಿನದ ಒಳಗಾಗಿ ಕನ್ನಡದಲ್ಲಿ ಬರೆಸದಿದಲ್ಲಿ ನಾಮಫಲಕ ತೆರವುಗೊಳಿಸಿ ನಿಯಮಾನುಸಾರ ದಂಡ ವಿಧಿಸಲಾಗುವುದು. ಅಲ್ಲದೇ ಉದ್ದಿಮೆ ಪರವಾನಿಗೆ ಪಡೆಯದಿದ್ದಲ್ಲಿ, ನವೀಕರಣ ಮಾಡಿಸದಿದ್ದಲ್ಲಿ ಕಡ್ಡಾಯವಾಗಿ ಪಡೆಯಲು ಸೂಚಿಸಿದ್ದಾರೆ.