ಅಂಗಡಿಗಳ ಮಾಲೀಕರು ಮಟನ ಮತ್ತು ಚಿಕನ್ ತ್ಯಾಜ್ಯಎಲೆಂದರಲ್ಲಿ ಎಸೆದಲ್ಲಿ ಅಂಗಡಿಯ ಉದ್ದಿಮೆ ಪರವಾನಿಗೆ ರದ್ದು

ಕಲಬುರಗಿ.ಜೂ.01:ಕಲಬುರಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಚಿಕನ್ ಹಾಗೂ ಮಟನ್ ಮಾರಾಟ ಮಾಡುವ ಅಂಗಡಿಯಿಂದ ದಿನನಿತ್ಯ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಾರ್ವಜನಿಕರ ಸ್ಥಳದಲ್ಲಿ ಅಥವಾ ಖುಲ್ಲಾ ನಿವೇಶನಗಳಲ್ಲಿ ಎಸೆಯದೇ ಅರ್ಹ ಗುತ್ತಿಗೆದಾರರಾದ ಕಲಬುರಗಿ ನಗರದ ಉಮರ ಕಾಲೋನಿಯಲ್ಲಿನ ಎಮ್.ಎಸ್.ಡಬ್ಲ್ಯೂ.ಎಮ್. ಎಂಟರ್‍ಪ್ರೈಸೆಸ್ ಇವರಿಗೆ ನೀಡಬೇಕು. ಇದಕ್ಕೆ ತಪ್ಪಿದ್ದಲ್ಲಿ ಮಾಲೀಕರ ವಿರುದ್ಧ ನಿಯಾಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವುದರ ಜೊತೆಗೆ ಸಂಬಂಧಪಟ್ಟ ಅಂಗಡಿಯ ಉದ್ದಿಮೆ ಪರವಾನಿಗೆಯನ್ನು ಸಹ ರದ್ದುಪಡಿಸಲಾಗುತ್ತದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಈ ಕುರಿತು ನಗರದ ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿದ್ದು, ಈ ತ್ಯಾಜ್ಯವನ್ನು ಸಂಗ್ರಹಿಸಿ ನಗರ ಪ್ರದೇಶದಿಂದ ಹೊರಗಡೆ(ಚಿಕನ್ ಆಂಡ್ ಮಟನ್ ವೆಸ್ಟ್ ಲಿಫ್ಟಿಂಗ್) ಯಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಅರ್ಹ ಗುತ್ತಿಗೆದಾರರಾದ ಕಲಬುರಗಿ ನಗರದ ಎಮ್.ಎಸ್.ಎಮ್.ಡಬ್ಲ್ಯೂ. ಎಂಟರ್‍ಪ್ರೈಸೆಸ್ ಇವರಿಗೆ (ಮೊಬೈಲ್ ಸಂಖ್ಯೆ 8151888111) ನೀಡಬೇಕು.
ಚಿಕನ್ ಹಾಗೂ ಮಟನ್ ಮಾರಾಟ ಮಾಡುವ ಮಾಲೀಕರು ಇದರ ತ್ಯಾಜ್ಯವನ್ನು ನಗರದಲ್ಲಿ ಎಲೆಂದರಲ್ಲಿ ರಸ್ತೆಯ ಮೇಲೆ ಹಾಗೂ ಇನ್ನಿತರ ಸಾರ್ವಜನಿಕರ ಸ್ಥಳದಲ್ಲಿ ಮತ್ತು ಖುಲ್ಲಾ ನಿವೇಶನಗಳಲ್ಲಿ ಎಸೆಯುತ್ತಿದ್ದು. ಇದರಿಂದ ಅನೈರ್ಮಲಿಕರಣಗೊಳ್ಳುವುದರ ಜೊತೆಗೆ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅವರು ತಿಳಿಸಿದ್ದಾರೆ.