ಅಂಗಡಿಗಳಿಗೆ ಬೆಂಕಿ-5 ಲಕ್ಷ ರೂ ನಷ್ಟ

ಮುಳಬಾಗಿಲು,ಮಾ 24:ತಾಲೂಕಿನ ನಂಗಲಿ ಗ್ರಾಮದ ರಾ.ಹೆ. ೭೫ರ ಬದಿಯಲ್ಲಿದ್ದ ಫುಟ್‌ಪಾತ್ ಪೆಟ್ಟಿಗೆ ಅಂಗಡಿಗಳಿಗೆ ಸೋಮವಾರ ಮುಂಜಾನೆ ಆಕಸ್ಮಿಕ ಬೆಂಕಿ ತಗುಲಿ ಐದಕ್ಕೂ ಹೆಚ್ಚು ಅಂಗಡಿಗಳು ಸಂಪೂರ್ಣ ಸುಟ್ಟುಹೋಗಿದ್ದು ಸುಮಾರು ೩ ರಿಂದ ೫ ಲಕ್ಷರೂ ನಷ್ಟ ಸಂಭವಿಸಿದೆ.
ಒಂದು ಬಳೆ ಅಂಗಡಿ, ಎರಡು ಹಣ್ಣಿನ ಅಂಗಡಿ, ಎರಡು ಹೂವಿನ ಅಂಗಡಿ ಸಂಪೂರ್ಣವಾಗಿ ಸುಟ್ಟುಹೋಗಿದೆ. ಇದರಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಈ ಎಲ್ಲಾ ಅಂಗಡಿ ಮಾಲೀಕರು ಸಾಲ ಮಾಡಿ ರಸ್ತೆ ಬದಿಯಲ್ಲಿ ವ್ಯಾಪಾರ ವಹಿವಾಟು ಮಾಡಿಕೊಳ್ಳುವ ಮೂಲಕ ಜೀವನ ನಡೆಸತ್ತಿದ್ದು. ಖಾಸಗಿ ಫೈನಾನ್ಸ್ ಸೇರಿದಂತೆ ಬ್ಯಾಂಕುಗಳಲ್ಲಿ ಸಾಲ ಮಾಡಿಕೊಂಡಿದ್ದರು.
ಪೆಟ್ಟಿಗೆ ಅಂಗಡಿ, ತಳ್ಳುವ ಬಂಡಿಗಳಲ್ಲಿದ್ದ ಕಬ್ಬಣಿದ ವಸ್ತುಗಳು ಬಿಟ್ಟರೆ ಮಿಕ್ಕಲ್ಲೆ ವಸ್ತುಗಳು ಸುಟ್ಟು ಕರಕಲಾಗಿವೆ.
ಈ ಬಗ್ಗೆ ನಂಗಲಿ ಠಾಣೆಗೆ ಅಂಗಡಿ ಮಾಲೀಕರು ದೂರು ನೀಡಿದ್ದು ಪೋಲೀಸರು ಪರಿಶೀಲನೆ ನಡೆಸಿದ್ದಾರೆ.