ಅಂಗಡಿಗಳಿಗೆ ಬೀಗ ಹಾಕಿ ಎಚ್ಚರಿಕೆ

ಅಣ್ಣಿಗೇರಿ,sನ.25: ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸರ್ಕಾರಿ ಜಾಗದಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಿದ ಅಂಗಡಿಗಳಿಗೆ ಪೆÇ್ರಬೇಷನರಿ ಜಿಲ್ಲಾಧಿಕಾರಿ ಮಾಧವ್ ಗಿತ್ತೆ ಬೀಗ ಹಾಕುವ ಮೂಲಕ ಎಚ್ಚರಿಕೆ ನೀಡಿದರು.
ಕಟ್ಟಡ ಮಾಲೀಕರು ಕಟ್ಟಡ ನಿರ್ಮಾಣಕ್ಕಾಗಿ ಸ್ಥಳೀಯ ಆಡಳಿತದಿಂದ ಪಾರವಾನಿಗಿ ಪಡೆದಿರುವದು ಒಂದು ಕಡೆಯಾದರೆ, ಕಟ್ಟಡ ನಿರ್ಮಿಸಿರುವದು ಸರ್ಕಾರಿ ಜಾಗದಲ್ಲಿ. ಆದ್ದರಿಂದ ಇಂತಹ ಕಟ್ಟಡಗಳಲ್ಲಿ ನಿರ್ಮಾಣವಾದ ವಾಣಿಜ್ಯ ಮಳಿಗೆಗಳನ್ನು ಕೂಡಲೇ ತೆರುವುಗೊಳಿಸಬೇಕು ಎಂದು ಬೀಗಿ ಹಾಕಿದರು. ಅಷ್ಟೇ ಅಲ್ಲದೇ ಸರ್ಕಾರಿ ಜಾಗದಲ್ಲಿ ನಿರ್ಮಾಣಗೊಂಡ ಕಟ್ಟಡಗಳನ್ನು ತೆರುವು ಗೊಳಿಸುವವರೆಗೂ ಅಂಗಡಿಗಳ ಬಾಗಿಲನ್ನು ತೆರೆಯುವಂತಿಲ್ಲ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದರು.
ಅಧಿಕಾರಿಗಳು ಬೆಳ್ಳಂ ಬೆಳಿಗ್ಗೆ ಬಸ್ ನಿಲ್ದಾಣಕ್ಕೆ ಬಂದು ಅತಿಕ್ರಮಣಗೊಂಡ ಜಾಗ ಪರೀಶಿಲನೆ ಮಾಡುತ್ತಿದ್ದಂತಯೇ ಸಂಬಂಧಿಸಿದ ಮಾಲೀಕರು ಹಾಗೂ ಬಾಡಿಗೆದಾರರು ಸೇರಿಕೊಂಡು ಪೆÇ್ರಬೇಷನರಿ ಜಿಲ್ಲಾಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದರು. ಅಂಗಡಿಗಳನ್ನು ತೆರುವುಗೊಳಿಸದಿದ್ದರೆ ಪುರಸಭೆಯ ಜೆಸಿಬಿಯಿಂದ ನಾವೇ ಸ್ವತ: ತೆರುವುಗೊಳಿಸುತ್ತೇವೆ ಎಂದು ಜಿಲ್ಲಾಧಿಕಾರಿಗಳು ಅಂಗಡಿ ಮಾಲಿಕರಿಗೆ ತಿಳಿಸಿ ನಿರ್ಗಮಿಸಿದರು. ಅಷ್ಟೇ ಅಲ್ಲದೆ ತಾವೇ ಖುದ್ದಾಗಿ ಇನ್ನುಳಿದ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದುಕೊಂಡು ಊರಿನ ಪ್ರಮುಖ ಬೀದಿಗಳು ಮತ್ತು ಬಸ್ ನಿಲ್ದಾಣವನ್ನು ಸ್ವಚ್ಛತಾ ಕಾರ್ಯವನ್ನು ತಾವೇ ಸ್ವತಹ ಮಾಡುವುದರ ಮೂಲಕ ಪ್ರೆರೇಪಿಸಿದರು. ಮಧ್ಯಾಹ್ನ ಊರಿನ ಮಾರುಕಟ್ಟೆಯಲ್ಲಿ ಎಲ್ಲಾ ಮಳಿಗೆಯನ್ನು ವೀಕ್ಷಿಸಿ ಬಾಲಕಾರ್ಮಿಕರ ನಿಷೇಧ ಕಾಯ್ದೆಯಡಿ ತಿಳುವಳಿಕೆ ನೀಡಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.