ಅಂಗಡಿಗಳಿಗೆ ಅನಿರೀಕ್ಷಿತ ಭೇಟಿ: ದಂಡ

ಬಾದಾಮಿ, ಮೇ4: ಆಹಾರ ಮತ್ತು ತೂಕ ಮಾಪನ, ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳ ತಂಡ ನಗರದ ವಿವಿದ ಕಿರಾಣಿ ಅಂಗಡಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ದಂಡ ವಿಧಿಸಲಾಯಿತು.
ಆಹಾರ ಇಲಾಖೆಯ ಶಿರಸ್ತೇದಾರ ಜಿ.ಆರ್ ಸಬನೀಸ, ಆಹಾರ ನಿರೀಕ್ಷಕ ಎಮ್.ಎಸ್ ರೊಟ್ಟಿ, ಎಸ್.ಎ ಕೊತ್ವಾಲ, ಅಳತೆ ಮತ್ತು ತೂಕ ಇಲಾಖೆಯ ಅರವಿಂದ ಪವಾರ ಆಹಾರ ಸುರಕ್ಷತಾ ಇಲಾಖೆಯ ವಿನೋದ ಹೊಸೂರ ಇವರೆಲ್ಲರೂ ಜಂಟಿಯಾಗಿ ಹಲವಾರು ಕಿರಾಣಿ ಅಂಗಡಿಗಳ ಮೇಲೆ ಧಿಡೀರ ದಾಳಿ ಮಾಡಿ ಪರಿಶೀಲನೆ ಮಾಡಿ ಎಮ್.ಆರ್.ಪಿ ಗಿಂತ ಹೆಚ್ಚಿನ ದರಗಳಲ್ಲಿ ಅಗತ್ಯ ವಸ್ತುಗಳನ್ನು ಮಾರುತ್ತಿದ್ದವರ ಮೇಲೆ, ಅವಧಿ ಮುಗಿದ ವಸ್ತುಗಳನ್ನು ಮಾರುತ್ತಿದ್ದವರ ಹಾಗೂ ಸರ್ಕಾರ ನಿಗದಿ ಪಡಿಸಿದ ವೇಳೆಯ ನಂತರವೂ ಅಂಗಡಿ ತೆರೆದು ಬಹಳಷ್ಟು ಜನರನ್ನು ಸೇರಿಸಿ, ಕೋವಿಡ್ ನಿಯಮ ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದವರ ಮೇಲೆ ಸುಮಾರು ರೂ.11500 ದಂಡವನ್ನು ವಿಧಿಸಲಾಯಿತು.