ಅಂಗಡಿಗಳಲ್ಲಿಯೇ ತರಕಾರಿ ಮಾರಾಟಕ್ಕೆ ಅವಕಾಶಕ್ಕೆ ಒತ್ತಾಯ

ಸಿರವಾರ, ಏ.೨೮-ಪಟ್ಟಣದಲ್ಲಿ ತರಕಾರಿ ಮಾರುಕಟ್ಟೆ ಇಲ್ಲದೆ ಸ್ವಂತ, ಖಾಸಗಿ ಸ್ಥಳಗಳಲ್ಲಿ ತರಕಾರಿ ಮಾರಾಟ ಮಾಡಲಾಗುತ್ತಿದ್ದೂ, ಬಹುತೇಕ ಅಂಗಡಿಗಳ ದೂರ ದೂರ ಇರುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ಮಾಡಲಾಗುತ್ತಿದ್ದೂ, ನೀವು ನಿಗದಿ ಮಾಡಿರುವ ಸ್ಥಳಗಳಿಗೆ ಹೋಗಿ ವ್ಯಾಪಾರ ಮಾಡುವದರಿಂದ ತೊಂದರೆಯಾಗುವುದರ ಜೊತೆಗೆ ನಷ್ಟಕ್ಕೆ ಗುರಿಯಾಗಬೇಕಾಗುತ್ತದೆ, ಆದರಿಂದ ಈಗಿರುವ ಸ್ಥಳದಲ್ಲಿಯೆ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ತರಕಾರಿ ಮಾರಾಟ ಒಕ್ಕೂಟದಿಂದ ತಹಸೀಲ್ದಾರರಿಗೆ ಮನವಿ ಪತ್ರವನ್ನು ನೀಡಿದರು.
ಪಟ್ಟಣದಲ್ಲಿ ಬಸವೇಶ್ವರ ವೃತ್ತ, ಪಂಚಾಯತಿ ಮುಂಭಾಗ, ಇಂದಿರಾ ನಗರ ಕ್ರಾಸ್, ಬಸ್ ನಿಲ್ದಾಣದ ಎಡ-ಬಲ, ಮಾನ್ವಿ ಕ್ರಾಸ್‌ಗಳಲ್ಲಿ ಮಾತ್ರ ತರಕಾರಿ ಮಾರಾಟ ಮಾಡಲಾಗುತ್ತಿದೆ. ಈ ಎಲ್ಲಾ ಸ್ಥಳಗಳಲ್ಲಿ ಸಾಮಾಜಿಕ ಅಂತರದಿಂದ, ಸರ್ಕಾರ ಎಲ್ಲಾ ನಿಯಮಗಳನ್ನು ಪಾಲನೆ ಮಾಡಿ ಮಾಡಲಾಗುತ್ತಿದೆವೆ ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ.
ಜಿಲ್ಲಾ ಹಾಗೂ ತಾಲೂಕ ಪ್ರದೇಶಗಳಲ್ಲಿ ತರಕಾರಿ ಮಾರುಕಟ್ಟೆ ಇರುತ್ತದೆ ಅಲ್ಲಿಯೆ ಎಲ್ಲಾರೂ ಮಾರಾಟ ಮಾಡುವುದರಿಂದ ಸಾಮಾಜಿಕ ಅಂತರ ಕಾಪಾಡುವುದು ಕಷ್ಟವಾಗುತ್ತದೆ ಎಂದು ತೆರೆದ ಮಾರುಕಟ್ಟೆಗೆ ತರಕಾರಿ ಮಾರಾಟವನ್ನು ಸ್ಥಳಾಂತರ ಮಾಡಲಾಗಿದೆ ಆದರೆ ಸಿರವಾರ ಪಟ್ಟಣದಲ್ಲಿ ತರಕಾರಿ ಮಾರುಕಟ್ಟೆಯೆ ಈಗಿರುವಾಗ ಈಗ ಏಕಾಏಕಿ ಪಟ್ಟಣದ ಬಾಲಕರ ಪ್ರೌಢಶಾಲೆ, ಉನ್ನತಿಕರಿಸಿದ ಪ್ರಾಥಮಿಕ ಶಾಲೆ, ಚುಕ್ಕಿ ತಜಸ್ಸು ಮಹಲ್ ಆವರಣಕ್ಕೆ ತರಕಾರಿ ಮಾರಾಟವನ್ನು ಸ್ಥಳಾಂತರ ಮಾಡಿ ೬-೧೦ ಗಂಟೆ ಸಮಯ ನಿಗದಿ ಮಾಡಲಾಗಿದೆ. ಇದರಿಂದ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ.
ನಿಗದಿ ಮಾಡಿದ ಸ್ಥಳಕ್ಕೆ ತರಕಾರಿಗಳನ್ನು ತರುವುದು, ಸಮಯ ಮುಗಿದ ಮೇಲೆ ಮನೆಗಳಿಗೆ ತೆಗೆದು ಕೊಂಡು ಹೋಗುವಾಗ ಹಾಗೂ ಬಿಸಿಲಿಗೆ ತರಕಾರಿ ಹಾಳಾಗುತ್ತವೆ. ತರಕಾರಿ ಮಾರಾಟದಿಂದ ಅಲ್ಪ ಸ್ವಲ್ಪ ಉಳಿಯುತ್ತದೆ ಅದು ಉಳಿಯದೆ ನಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ಒಂದೇ ಕಡೆ ವ್ಯಾಪಾರಕ್ಕೆ ಅವಕಾಶ ನೀಡಿರುವುದರಿಂದ ಜನ ದಟ್ಟಣೆ ಹೆಚ್ಚಾಗುತ್ತದೆ. ಅದು ಅಲ್ಲದೆ ಮಾಂಸ ಮಾರಾಟ, ಕಿರಾಣಿ ಅಂಗಡಿಗಳು ಒಂದರ ಪಕ್ಕದಲ್ಲಿ ಒಂದು ಇವೇ ಇಲ್ಲಿ ಜನ ದಟ್ಟಣೆ ಇರುವುದಿಲ್ಲವೆ ಇಲ್ಲಿ ಸಾಮಾಜಿಕ ಅಂತರ ಇರುವುದಿಲ್ಲ ಇಂತಹ ಅಂಗಡಿಗಳು ಬಿಟ್ಟು ನಮ್ಮ ಮೇಲೆ ವಿದಿಸಿರುವ ನಿಯಮಗಳನ್ನು ಹಿಂಪಡೆದು ಈಗಿರುವ ಸ್ಥಳದಲ್ಲಿಯೇ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ದಲಿತ ಮುಖಂಡ ಬಸವರಾಜಭಂಡಾರಿ, ಗುತ್ತುಲಶ್ರೀನಿವಾಸರಾವ, ಭೀಮಣ್ಣ, ಶೀವು, ಖಾಸಿಮ್‌ಸಾಬ್. ಶಿವು.ಎಸ್.ವೆಂಕಟೇಶ, ಸಲಿಂ ಸಾಬ್, ಗೋವಿಂದಮ್ಮ, ಮಲ್ಲಯ್ಯ, ದೇವರಾಜಗುಡಿ, ಉಮಾಪತಿ, ಲಕ್ಷ್ಮೀದೇವಿ, ಮೌನೇಶ, ಹನ್ಮಂತ ಭಜಂತ್ರಿ, ನಾಗಮ್ಮ ಸೇರಿದಂತೆ ಇನ್ನಿತರರು ಇದ್ದರು.