ಅಂಕಿ ಅಂಶ ತಪ್ಪಾಗಬಾರದು ಎಂಬುದಕ್ಕಷ್ಟೇ ನನ್ನ ಒತ್ತಡ: ರೋಹಿಣಿ ಸಿಂಧೂರಿ

ಮೈಸೂರು: ಜೂ.04: ಅಂಕಿ ಅಂಶಗಳನ್ನು ಅಧಿಕೃತವಾಗಿ ನಾವು ಕೊಡುತ್ತಿದ್ದೇವೆ. ಕೊರೊನಾ ವಿಚಾರದಲ್ಲಿ ಅಂಕಿ ಅಂಶ ತಪ್ಪಾಗಬಾರದು. ವಾರ್ಡ್, ಪಂಚಾಯಿತಿಗಳಲ್ಲಿ ಇವತ್ತು 40 ನಾಳೆ 400 ಬರಬಾರದು. ಅಂಕಿ ಅಂಶ ಸರಿ ಇರಬೇಕು ಎಂಬ ಕಾರಣಕ್ಕೆ ನಮ್ಮ ಒತ್ತಡ ಅಷ್ಟೇ ಎಂದು ಶಿಲ್ಪಾ ನಾಗ್ ಆರೋಪಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದರು.
ಇಂದು ನಗರದಲ್ಲಿ ಮಾಧ್ಯಮಗಳಿಗೆ ಶಿಲ್ಪಾನಾಗ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಕೋವಿಡ್-19 ಸಂದರ್ಭದಲ್ಲಿ ಎಲ್ಲರ ಸಹಕಾರ ಬೇಕಾಗುತ್ತದೆ. ಸಮನ್ವಯತೆ ಕೊರತೆಯಾಗಿದೆ ಎಂಬ ಭಾವನೆ ನನಗಿಲ್ಲ. ನಾನು ಅಥಾರಿಟಿ ಅಲ್ಲ ಅನ್ನೋದನ್ನು ಸಿಎಸ್ ಕ್ಲಾರಿಫೈ ಮಾಡ್ತಾರೆ. ಆಫೀಸರ್ಸ್ ಏನೇ ಸಮಸ್ಯೆ ಆದರೂ ಫೆÇೀರಂ ಇರುತ್ತೆ ಅಲ್ಲಿ ಹೇಳಬಹುದು. ಹೈಯರ್ ಆರ್ಮಿ ಇರುತ್ತೆ ಅಲ್ಲಿ ಹೇಳಬಹುದಿತ್ತು. ಜುಲೈ ಒಳಗೆ ಜಿಲ್ಲೆಯನ್ನು ಕೋವಿಡ್ ಮುಕ್ತ ಮಾಡಬೇಕು. ಅಧಿಕೃತ ಮಾಹಿತಿ ತಪ್ಪಾಗಬಾರದು ಎಂಬುದು ನನ್ನ ಉದ್ದೇಶ. ಸಿಎಸ್ ಬರ್ತಿದ್ದಾರೆ. ಎಲ್ಲವನ್ನು ಅವರ ಗಮನಕ್ಕೆ ತರ್ತೇನೆ ಈಗಾಗಲೇ ನಾನು ಹೇಳಬೇಕಾದುದನೆಲ್ಲಾ ಪ್ರೆಸ್ ನೋಟ್ ನಲ್ಲಿ ಹೇಳಿದ್ದೇನೆ. ಸಮನ್ವಯತೆ ಸಮಸ್ಯೆಯಾಗಿತ್ತು ಎಂಬ ಭಾವನೆ ನನಗಿಲ್ಲ ಎಂದರು.
ವೈದ್ಯರಿಗೆ, ನರ್ಸ್‍ಗೆ, ಆಶಾಕಾರ್ಯಕರ್ತರಿಗೂ ಎಲ್ಲರಿಗೂ ಒತ್ತಡ ಇದೆ, ಎಲ್ಲರೂ ಒತ್ತಡದಲ್ಲಿಯೇ ಕೆಲಸ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ, ರಾಜ್ಯಸರ್ಕಾರ ಎಲ್ಲರೂ ಕೊರೋನಾ ನಿರ್ವಹಣೆ ಸಂಬಂಧ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ಸಮಯದಲ್ಲಿ ನಾವು ಜನರಿಗೆ ಸರಿಯಾದ ಮಾಹಿತಿ ನೀಡಬೇಕು ಇಷ್ಟೇ ನಾವು ಕೇಳಿಕೊಳ್ಳೋದು ಎಂದರು.
ಜುಲೈ ಒಳಗೆ ಜಿಲ್ಲೆಯನ್ನು ಕೋವಿಡ್ ಮುಕ್ತ ಮಾಡಬೇಕು, ಅಧಿಕೃತ ಮಾಹಿತಿ ತಪ್ಪಾಗಬಾರದು ಎಂಬುದು ನನ್ನ ಉದ್ದೇಶ. ಮುಖ್ಯಮಂತ್ರಿಗಳು ಬರುತ್ತಿದ್ದಾರೆ. ಎಲ್ಲವನ್ನು ಅವರ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.