ಅಂಕಿ ಅಂಶಗಳಲ್ಲಿ  ಸೋತ್ತಿದ್ದೇನೆ ಮತದಾರರ ಮನದಲ್ಲಿದ್ದೇನೆ ;  ಹೆಚ್.ಪಿ. ರಾಜೇಶ್

ಜಗಳೂರು.ಮೇ.೧೫:- ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಡಿಮೆ ಅಂತರದಿoದ ಸೋತಿರುವುದು ನನಗೆ ಹಾಗೂ ಬೆಂಬಲ ನೀಡಿದ ಕ್ಷೇತ್ರದ ಸ್ವಾಭಿಮಾನಿ ಮತದಾರರಿಗೆ ನೋವುಂಟು ಮಾಡಿದೆ. ಇದರಿಂದ ಯಾರೂ ಎದೆಗುಂದಬೇಕಿಲ್ಲ. ಚುನಾವಣೆಯಲ್ಲಿ ಗೆಲುವು ಸೋಲು ಸಾಮಾನ್ಯ. ಅಂಕಿ ಅಂಶಗಳಲ್ಲಿ ನಾನು ಸೋತಿರಬಹುದು. ನೈತಿಕ ವಾಗಿ ಜನರ ಮನಸ್ಸು, ಹೃದಯದಲ್ಲಿ ಗೆದ್ದಿರುವ ತೃಪ್ತಿ ನನಗಿದೆ ಎಂದು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಹೇಳಿದರು.ಪಟ್ಟಣದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮತ ನೀಡಿದ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ನನಗೆ ಟಿಕೆಟ್ ಸಿಗ ದ ಹಿನ್ನೆಲೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದರೂ ಸಹ ಕ್ಷೇತ್ರದ ಸ್ವಾಭಿ ಮಾನಿ ಮತದಾರರು ಈ ಬಾರಿ ಚುನಾವಣೆಯ ಪ್ರಕ್ರಿಯೆಯಲ್ಲಿ ನನ್ನ ನಿರ್ಧಾರಗಳಿಗೆ ಎಲ್ಲಾ ಜನಾಂಗದ ಬೆಂಬಲಿ ಗರು ಸಹಕಾರ ನೀಡಿ ದ್ದು, ಅಪಾರ ಜನಬೆಂಬಲ ದೊರೆತರೂ ಮತಗಳಿಕೆಯಲ್ಲಿ ಎರಡು ರಾಷ್ಟ್ರೀಯಯ ಪಕ್ಷಗಳ ಅಭ್ಯರ್ಥಿಗಳಿಗೆ ಬೆವರಿಳಿಸುವ ಕೆಲಸವನ್ನು ಸ್ವಾಭಿಮಾನಿ ಮತದಾರರು ಮಾಡಿದ್ದಾರೆ.ಅದೃಷ್ಟ ನನ್ನ ಕಡೆ ಇಲ್ಲಾ ನೋಟಾ ಮತಗಳು ನನ್ನ ಮತಗಳು: ಪಕ್ಷೇತರ ಅಭ್ಯರ್ಥಿಯಾದ ನನಗೆ ಗೆಲ್ಲುವ ವಿಶ್ವಾಸ ಇಮ್ಮಡಿಯಾಗಿ ತ್ತು. ಆದರೆ ಅದೃಷ್ಠ ನನ್ನ ಕಡೆ ಇಲ್ಲದೆ ಚಲಾವಣೆಯಾದ 2241 ನೋಟಾ ಮತಗಳು ನನ್ನ ಮತಗಳೇ ಆಗಿದ್ದು,ಈ ಬಗ್ಗೆ ಮತದಾರ ರಿಗೆ ಮನವರಿಕೆ ಮಾಡುವಲ್ಲಿ ಸ್ವಲ್ಪ ಎಡವಿದಂತಾಗಿದೆ. ಈ ರೀತಿ ಯಾಗಿ ಪರಾಭವಗೊಂಡಿದ್ದು ನನ್ನ ದೌರ್ಭಾಗ್ಯವೆನ್ನಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಲೋಕಣ್ಣ, ರೇವಣ್ಣ, ಬಸವಾಪುರ ರವಿಚಂದ್ರ, ಕಣ್ವಕುಪ್ಪೆ ಮಾರಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.