ಅಂಕಲ್‌ಗೆ ಬಿಸಿಮುಟ್ಟಿಸಿದ ರಾಖಿ

ಮುಂಬೈ,ಜೂ.೬- ಬಾಲಿವುಡ್ ನ ಐಟಂ ಡ್ಯಾನ್ಸರ್ ರಾಖಿ ಸಾವಂತ್ ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ.
ಇದೀಗ ಮತ್ತೊಂದು ವಿಷಯಕ್ಕೆ ಅವರು ಸುದ್ದಿಯಾಗಿದ್ದಾರೆ. ನಿನ್ನೆ ರಾಖಿ ಸಾವಂತ್, ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿ ಯೊಬ್ಬ ಒಂದೇ ಸಮನೆ ನೋಡುತ್ತಾ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದ. ಇದನ್ನು ಗಮನಿಸಿದ ರಾಖಿ ಸಾವಂತ್, ಒಹೋ ಅಂಕಲ್ ನೀವು ಹುಡುಗಿಯರನ್ನು ಯಾವತ್ತೂ ನೋಡಿಲ್ಲವೇ ಎಂದು ಗರಂ ಆಗಿದ್ದಾರೆ.
ನಾನು ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದೇನೆ ನೀವು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುವುದನ್ನು ನಿಲ್ಲಿಸಿ ಇಲ್ಲಿಂದ ಸುಮ್ಮನೆ ಹೋಗಿ ಎಂದು ಆ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹುಡುಗಿರನ್ನು ನೀವು ಯಾವತ್ತೂ ನೋಡಿಲ್ಲವೇ ರೀತಿ ನನ್ನನ್ನು ನೋಡುತ್ತಿದ್ದೀರಿ ಎಂದು ಮತ್ತು ಮಗಳ ಜೊತೆ ಮಾತನಾಡುವುದನ್ನು ನಿಲ್ಲಿಸಿ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ವ್ಯಕ್ತಿ ವಿರುದ್ಧ ಹರಿಹಾಯ್ದಿದ್ದಾರೆ.
ರಾಕಿ ಗರಂ ಆಗುತ್ತಿದ್ದಂತೆ ವ್ಯಕ್ತಿ ಎದುರು ಮಾತನಾಡದೆ ಬೈಕ್ ಏರಿ ಹೊರಟದನ್ನು ಗಮನಿಸಿ, ಮುಂದೆ ನೋಡಿಕೊಂಡು ಗಾಡಿ ಓಡಿಸಿ ಇಲ್ಲದಿದ್ದರೆ ಆಕ್ಸಿಡೆಂಟ್ ಆಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.
ಮತ್ತಿನ ಹುಡುಗಿ:
ದೇವರೇ ಧರೆಗಿಳಿದು ಬಂದ ನೀನು ಮುತ್ತಿನಂತ ಹುಡುಗಿ ಎಂದರೂ ನಾನು ನಂಬುವುದಿಲ್ಲ . ದೇವರು ಹೇಳಿದರೆ ನೀನೊಬ್ಬ ಮುಗ್ಧ ಎಂದು ಹೇಳುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ರಾಖಿ ಸಾವಂತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.