
ಹಟ್ಟಿಚಿನ್ನದಗಣಿ : ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಬೇಕು. ಕನ್ನಡ ಮಾಧ್ಯಮದಲ್ಲಿ ಮಕ್ಕಳು ಶಿಕ್ಷಣ ಪಡೆದು ಉತ್ತಮ ಸಮಾಜ ನಿರ್ಮಾಣ ಮಾಡಬೇಕೆಂದು ಗೌಡೂರು ಮಾಜಿ ತಾ.ಪಂ ಸದಸ್ಯ ರಾಜಾ ಸೇತುರಾಂ ನಾಯಕ್ ಹೇಳಿದರು.
ಹಟ್ಟಿಚಿನ್ನದಗಣಿಗೆ ಸಮೀಪದ ಗೌಡೂರು ಗ್ರಾಮದ ಸ.ಹಿ.ಪ್ರಾಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ, ನೆರಳು ಸೇವಾ ಟ್ರಸ್ಟ್ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಮಂಡಳಿ ಹಟ್ಟಿ ಪಟ್ಟಣ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಅಂಕಲಿಪಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ಉತ್ತಮ ಶಿಕ್ಷಣ ಹೊಂದಿ ಉತ್ತಮ ಸಾಧನೆ ಮಾಡಬೇಕೆಂದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗುರುರಾಜನಾಯಕ್, ಎಸ್ಡಿಎಂಸಿ ಅಧ್ಯಕ್ಷ ಹನುಮಂತ ಮಾತನಾಡಿದರು.
ಮುಖ್ಯ ಶಿಕ್ಷಕಿ ವಿದ್ಯಾವತಿ, ಹಾಗೂ ಫರೀದ್, ಆರೀಫ್ ಶಿಕ್ಷಕರು, ಅಂಬೇಡ್ಕರ್ ಯುವಕ ಮಂಡಳಿ ಅಧ್ಯಕ್ಷ ವಿನೋದ್ ಕಮಲದಿನ್ನಿ, ಕಾರುಣ್ಯ ಅನಾಥ ಮತ್ತು ವೃದ್ಧಾಶ್ರಮದ ಗೌರವಾಧ್ಯಕ್ಷ ಭೀಮಾಶಂಕರ್ ಸಂಗೇಪಾಗ್, ನೆರಳು ಸೇವಾ ಟ್ರಸ್ಟಿನ ಅಧ್ಯಕ್ಷ ಅಮರೇಶ್ ಮೇದಾರ್, ಚಂದ್ರಶೇಖರ್ ನಾಯಕ್, ಬಲಭೀಮರಾವ್ ಕುಲಕರ್ಣಿ, ಶಿಕ್ಷಣ ಪ್ರೇಮಿ ವಿರೇಶ್ ಅಂಗಡಿ, ರಾಚಯ್ಯಸ್ವಾಮಿ ಗಣಾಚಾರಿ, ಈರಣ್ಣ ಯಲಗಟ್ಟಾ, ಅಮರಗುಂಡ ಸಂಗಟಿ ಇದ್ದರು.
ಫೋಟೊ೧ಹಟ್ಟಿಚಿನ್ನದಗಣಿ೩: ನೆರಳು ಸೇವಾ ಟ್ರಸ್ಟ್ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಮಂಡಳಿ ಹಟ್ಟಿ ಪಟ್ಟಣ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಅಂಕಲಿಪಿ ವಿತರಣೆ ಮಾಡಲಾಯಿತು.