ಅಂಕಮನಾಳ್ ಗ್ರಾಮದಲ್ಲಿ ವಾಂತಿಭೇದಿ ಶಾಸಕ ಈ.ತುಕರಾಂ ಭೇಟಿ


ಸಂಜೆವಾಣಿ ವಾರ್ತೆ
ಸಂಡೂರು:ಅ: 6: ಈಗಾಗಲೇ ತಾಲೂಕಿನ ಅರೋಗ್ಯ ಅಧಿಕಾರಿಗಳ ತಂಡದೊಂದಿಗೆ ಅಂಕಮನಾಳ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಒಟ್ಟು 23 ರೋಗಿಗಳು ಕಲುಷಿತ ನೀರನ್ನು ಸೇವನೆ ಮಾಡಿ ವಾಂತಿಭೇದಿ ಉಂಟಾಗಿದೆ ತಕ್ಷಣ ಅವರಿಗೆ ಚಿಕಿತ್ಸೆ ಕೊಡುವ ವ್ಯವಸ್ಥೆ ಮಾಡಿದ್ದೇನೆ ಎಂದು ಶಾಸಕ ಈ.ತುಕರಾಂ ತಿಳಿಸಿದರು.
ಅವರು  ತಾಲೂಕಿನ ಅಂಕಮನಾಳ್ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿಭೇದಿ ಪ್ರಕರಣಗಳು ಬೆಳಕಿಗೆ ಬಂದಿದ್ದು ತಕ್ಷಣ ಮಾಹಿತಿ ಪಡೆದು ಸ್ಥಳಕ್ಕೆ ಶಾಸಕರು ಭೇಟಿನೀಡಿ ಸಾರ್ವಜನಿಕರಿಗೆ ಧೈರ್ಯ ಹೇಳುವುದರ ಜೊತೆಗೆ ಅವರ ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದೇವೆ, ಈಗಾಗಲೇ 2 ರೋಗಿಗಳನ್ನು ಬಳ್ಳಾರಿ, 1 ರೋಗಿ ಕೂಡ್ಲಿಗಿ, 11 ರೋಗಿಗಳು ಸಂಡೂರು ಅಸ್ಪತ್ರೆಗೆ, 5 ರೋಗಿಗಳು ಈಗಾಗಲೇ ಚಿಕಿತ್ಸೆ ಪಡೆದು ಡಿಸ್‍ಚಾರ್ಜ ಅಗಿದ್ದಾರೆ, 1 ರೋಗಿಯನ್ನು ಅಂಕಮನಾಲ್ ಗ್ರಾಮದ ಸಮುದಾಯವನ್ನು ತಾತ್ಕಲಿಕ ಚಿಕಿತ್ಸಾ ಕೇಂದ್ರ ತೆರೆದು ಅಲ್ಲಿಯೇ ಚಿಕಿತ್ಸೆ ನೀಡುತ್ತಿದ್ದಾರೆ, ಯಾವುದೇ ರೀತಿ ಸಾರ್ವಜನಿಕರು ಅತಂಕಕ್ಕೆ ಒಳಗಾಗದಂತೆ ಸೂಕ್ತ ವ್ಯವಸ್ಥೆ ಮಾಡಿದ್ದು ತಕ್ಷಣ ಶುದ್ಧ ನೀರನ್ನು ಗ್ರಾಮಕ್ಕೆ ಪೂರೈಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
  ಈ ಬಗ್ಗೆ ತಾಲೂಕು ದಂಡಾಧಿಕಾರಿ ಗುರುಬಸವರಾಜ್ ಕೆ. ಎಂ.ಗ್ರಾಮದಲ್ಲಿ ಮನೆಗಳ ಮುಂದೆ ಕುಡಿಯುವ ನೀರಿಗಾಗಿ ತೋಡಿದ ಗುಂಡಿಗಳಲ್ಲಿ ಮಳೆ ನೀರು ನಿಂತಿದ್ದು ನಲ್ಲಿಯ ಟ್ಯಾಪ್ ಮುಚ್ಚದೆ ಇದ್ದುದರಿಂದ ಮಳೆಯಿಂದ ಬಿದ್ದ ನೀರು ಗುಂಡಿ ಸೇರಿ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಪೈಪ್ಲೈನ್ ಹೋಗಿರುವುದರಿಂದ ಈ ಘಟನೆ ಸಂಭವಿಸಿದೆ ಈ ಬಗ್ಗೆ ಗ್ರಾಮಾಭಿವೃದ್ಧಿ ಅಧಿಕಾರಿಗೆ ಸರಿಪಡಿಸಲು ಸೂಚಿಸಿದ್ದು ಅಲ್ಲಿಯವರೆಗೂ ನೀರಿನ ಟ್ಯಾಂಕರ್ ಗಳಿಂದ ಊರಿಗೆ ನೀರು ಪೂರೈಕೆ ಮಾಡಲು ಸೂಚಿಸಿರುವುದಾಗಿ ಗ್ರಾಮದಲ್ಲಿ ಇನ್ನೂ ಪ್ರಕರಣಗಳು ಹೆಚ್ಚಾದಲ್ಲಿ ಚಿಕಿತ್ಸೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಅಂಕಮನಾಳ್ ಗ್ರಾಮದಲ್ಲಿ   ತಾತ್ಕಾಲಿಕ ಆಸ್ಪತ್ರೆ ತೆರೆಯಲಾಗಿದೆ ಎಂದು ತಿಳಿಸಿದರು. ಶಾಸಕರಾದ ಈ. ತುಕಾರಾಂ ಆಸ್ಪತ್ರೆಗೆ ಭೇಟಿ ನೀಡಿ ದಾಖಲಾದ ರೋಗಿಗಳ ಆರೋಗ್ಯ ವಿಚಾರಿಸಿದರು ಹೆಚ್ಚಿನ ಚಿಕಿತ್ಸೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು

Attachments area