ಅಂಕನಶೆಟ್ಟಿಪುರ ಪ್ರೇರಣ ವಿದ್ಯಾಸಂಸ್ಥೆ ಶಾಲಾ ವಾರ್ಷಿಕೋತ್ಸವ

ಸಂಜೆವಾಣಿ ವಾರ್ತೆ
ಚಾಮರಾಜನಗರ ಫೆ 5 :- ಮನೋರಂಜನೆಗಳಿಂದ ಮಕ್ಕಳ ಮನಸನ್ನು ಗೆಲ್ಲಬಹುದು ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜೊತೆಯಲ್ಲಿ ಸಾಂಸ್ಕೃತಿಕವಾಗಿ ಬಿಂಬಿಸುವುದರಿಂದ ವಿದ್ಯಾರ್ಥಿಗಳಿಗೆ ಜ್ಞಾನವು ಹೆಚ್ಚುತ್ತದೆ ಎಂದು ಹರದನಹಳ್ಳಿ ಕೃಷಿ ವಿಜ್ಞಾನಕೇಂದ್ರದ ಸಸ್ಯರೋಗ ತಜ್ಞ ಡಾ.ಬಿ.ಪೆÇಂಪನಗೌಡ ತಿಳಿಸಿದರು.
ತಾಲ್ಲೂಕಿನ ಅಂಕನಶೆಟ್ಟಿಪುರದ ಸ್ಪೂರ್ತಿ ಟ್ರಸ್ಟ್ ಹಾಗೂ ಪ್ರೇರಣಾ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪೆÇ್ರತ್ಸಾಹ ನೀಡುವುದರಿಂದ ಅವರ ಜೀವನಕ್ಕೆ ದಾರಿ ಮಾಡಿಕೊಟ್ಟಂತೆಯಾಗುತ್ತದೆ. ಶಾಲೆಗಳಲ್ಲಿ ಚಿಕ್ಕ ಮಕ್ಕಳಿನಿಂದಲೇ ಕ್ರೀಡೆ, ಕಲಾ ಪ್ರದರ್ಶನ, ನೃತ್ಯ, ನಾಟಕಗಳಲ್ಲಿ ಭಾಗವಹಿಸುವ ಶಕ್ತಿಯನ್ನು ಶಿಕ್ಷಕರು ಮತ್ತು ಪೆÇೀಷಕರು ತುಂಬಬೇಕು. ಇದರಿಂದ ಮಕ್ಕಳ ಬುದ್ದಿ ಶಕ್ತಿ ಹೆಚ್ಚಾಗುತ್ತದೆ. ಜೊತೆಗೆ ವಿದ್ಯೆಯ ಕಡೆಯು ಗಮನ ಹೆಚ್ಚುವಂತೆ ಮಾಡಬೇಕು. ಮಕ್ಕಳು ಮೊಬೈಲ್ ಬಳಕೆಯಿಂದ ಶಿಕ್ಷಣ ಕುಂಟಿತವಗುತ್ತದೆ. ಮುಂದೆ ಪಶ್ಯತಾಪ ಪಡೆಬೇಕಗುತ್ತದೆ. ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ದಿಯಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೇರಣ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಪಿ.ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಶಿಕ್ಷಣವನ್ನು ನೀಡಲಾಗುತ್ತಿದೆ. ಈ ಬಾರಿ ನಮ್ಮ ಸಾಲೆಯ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದು ಶಾಲೆಗೆ ಕೀರ್ತಿತಂದಿ ದ್ದಾರೆ.ಪ್ರತಿವರ್ಷದಂತೆ ಈಬಾರಿ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಶೈಲಕುಮಾರ್ ಮಾತನಾಡಿ ವಿದ್ಯಾರ್ಥಿಗಳಿಗೆ ಅಂಗ್ಲ ಭಾಷೆಯ ಜೊತೆಯಲ್ಲಿ ಹೆಚ್ಚು ಕನ್ನಡ ಭಾಷೆಗೆ ಒತ್ತು ನೀಡಬೇಕು, ನಮ್ಮ ನಾಡು,ನುಡಿ, ಜಲದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜ್ಞಾನ ಬೆಳಯಬೇಕು.ಎಂದು ಹೇಳಿದರು.
ವೆಂಕಟಯ್ಯನಛತ್ರ ಗ್ರಾಪಂ ಅಧ್ಯಕ್ಷ ಆರ್.ಲಾವಣ್ಯಮಹೇಶ್, ಶಾಲಾ ಕಾರ್ಯದರ್ಶಿ ಶಿವಸ್ವಾಮಿ ವಕೀಲರು ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಪೆÇೀಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಶಾಲಾ ಮಕ್ಕಳಿಂದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.