ಅಂಕಗಳ ಜತೆ ಕೌಶಲ ಇಂದಿನ ಅಗತ್ಯ : ಭುವನೇಶ್ ಪಾಟೀಲ್

ಕಲಬುರಗಿ:ಜ.25: ಕೌಶಲವಿಲ್ಲ, ಸೂಕ್ತ ಸಂವಹನ ಇಲ್ಲದಿದ್ದರೆ ಶೇ.100 ಅಂಕ ಪಡೆದರೂ ಭವಿಷ್ಯದಲ್ಲಿನ ಸಾಧನೆ ಬಹುದಿನ ಉಳಿಯುವುದು ಕಷ್ಟವಾಗಲಿದ್ದು, ಕೌಶಲಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್ ಹೇಳಿದರು.
ಗಣೇಶ ನಗರದಲ್ಲಿರುವ ಎಸ್.ಎಂ. ಹಿರಿಯ ಪ್ರಥಮಿಕ ಶಾಲೆ ಮತ್ತು ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ 49ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಿಂದ ಪ್ರಶಸ್ತಿ, ಬಹುಮಾನ, ಕೀರ್ತಿ ಜತೆಗೆ ದೈಹಿಕ ಶಕ್ತಿ ವೃದ್ಧಿಯಾಗುತ್ತದೆ. ತಂಡ ನಿರ್ವಹಣೆ, ಸಾಮಾಜಿಕ ಜವಾಬ್ದಾರಿ, ನಾಯಕ ತ್ವವನ್ನು ಕ್ರೀಡೆ ಮಕ್ಕಳಲ್ಲಿ ಬೆಳೆಸುತ್ತದೆ ಎಂದು ಹೇಳಿದರು. ಅಂಕಗಳಿಕೆಗೆ ನೀಡುವಷ್ಟೇ ಮಹತ್ವದ ಕ್ರೀಡಾಕೂಟದಲ್ಲಿ ಸ್ಪರ್ಧೆಗೂ ನೀಡ ಬೇಕು. ಆಗ ಮಾತ್ರ ಉಜ್ವಲ ಭವಿಷ್ಯ ನಿರ್ಮಾಣ ವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸುಮೀತಕುಮಾರ ಎಸ್ ಪಾಟೀಲ್, ಶಾಲೆಯ ಅಧ್ಯಕ್ಷರಾದ ಡಾ.ಪದ್ಮಪ್ರೀಯಾ ಸೇರಿದಂತೆ ಭೋಧಕ-ಭೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು, ಪಾಲಕರು/ಪೆÇೀಷಕರು ಪಾಲ್ಗೊಂಡಿದ್ದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.