ವಿಜಯಪುರ: ಜೂ.20:ದಿ.18-06-2023ರಂದು ನಡೆದ ಕದಳಿ ಸಮಾವೇಶದಲ್ಲಿ ಎರಡು ಗೋಷ್ಠಿಗಳು, ಬಹಿರಂಗ ಅದಿವೇಶನ ಮತ್ತು ಸಮಾರೋಪ ಸಮಾರಂಭ ಜರುಗಿದವು.
ಶರಣ ಚಿಂತನ ಗೋಷ್ಠಿಂiÀÀುಲ್ಲಿ ಎರಡು ಪ್ರಬಂಧಗಳನ್ನು ಮಂಡಿಸಲಾಯಿತು. ಕಿತ್ತೂರಿನ ಸಹ ಪ್ರಾಧ್ಯಾಪಕಿಂiÀÀುರಾದ ಡಾ.ಪ್ರಜ್ಞಾ ಮತ್ತಿಹಳ್ಳಿ ‘ವಚನಕಾರರ ಕಾಲ ಮತ್ತು ವರ್ತಮಾನ’ ವಿಷಂiÀÀು ಕುರಿತು ಮಾತನಾಡಿದರು. ಭಾವನಾತ್ಮಕ ಸಂಬಂಧಗಳನ್ನು ವೈಭವಿಕರಿಸುವುದರ ಬದಲು ಶರಣರ ವಚನಗಳನ್ನು ಅರಿತು ಆಚರಿಸಿ ಬದುಕನ್ನು ಆನಂದಮಂiÀÀು ಗೊಳಿಸುವುದರಲ್ಲಿ ಸಾರ್ಥಕ್ಯವಿದೆ ಎಂದು ಹೇಳಿದರು.
ಶ್ರೀಮತಿ ಪ್ರೇಮಕ್ಕ ಅಂಗಡಿ ಅವರು “ಪ್ರಸ್ತುತದಲ್ಲಿ ಮಾತೃತ್ವದ ನೆಲೆ” ಕುರಿತು ಮಾತನಾಡಿದರು. ಮಾತೃತ್ವ ಎನ್ನುವುದು ಪರಮಾತ್ಮ ನೀಡಿದ ನೈಸರ್ಗಿಕ ಕ್ರಿಂiÀÉು. ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದ ಸಂದರ್ಭದಲ್ಲಿ ಕುಟುಂಬಗಳು ಶಿಥಿಲಗೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಇದರಿಂದ ಪ್ರೀತಿ, ವಾತ್ಸಲ್ಯಗಳಿಂದ ವಂಚಿತರಾಗಿರುವ ಮಕ್ಕಳು ಕರಳಿನ ಸಂಬಂಧದಿಂದ ದೂರವಾಗುತ್ತಿದ್ದಾರೆ. ಶರಣರ ವಚನಗಳಲ್ಲಿನ ತತ್ವ ಸಂದೇಶಗಳನ್ನು ಹಾಗೂ ಮೌಲ್ಯಗಳನ್ನು ಉಳಿಸಿ ರಕ್ಷಿಸಿಕೊಂಡು ಹೋದರೆ ಬೆಳಕಿನ ಮಾರ್ಗ ತೋರುವದೆಂದು ಹೇಳಿದರು.
ಕುವೆಂಪು ವಿಶ್ವವಿದ್ಯಾಲಂiÀÀುದ ಡಾ.ಬಸವರಾಜ ನೆಲ್ಲಿಸರ ಅವರು ಅಧ್ಯಕ್ಷ ಸ್ಥಾನವಹಿಸಿ-ನಾವು ಹೆಚ್ಚು ಮಾತನಾಡುವುದನ್ನು ನಿಲ್ಲಿಸಿ ಶರಣರ ವಚನಗಳಲ್ಲಿನ ಮೌಲ್ಯಗಳನ್ನು ಅಳವಡಿಸಿಕೊಂಡರೆ ಧಾರ್ಮಿಕವಾಗಿ, ಸಾಮಾಜಿಕವಾಗಿ, ನೈತಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವೆಂದು ಹೇಳಿದರು. ಡಾ.ಸಂಗಮೇಶ ಮೇತ್ರಿ, ಆರ್.ವಾಂiÀÀiï.ಕೊಣ್ಣೂರ, ಶ್ರೀಮತಿ ಕಾಶಿಬಾಯಿ ರಾಂಪೂರ ವೇದಿಕೆಂiÀÀುಲ್ಲಿ ಉಪಸ್ಥಿತರಿದ್ದರು.
ನಾಲ್ಕನೆಂiÀÀು “ಪ್ರಶ್ನೋತ್ತರ ಗೋಷ್ಠಿಂiÀÀುು” ಪ್ರೇಕ್ಷಕರನ್ನು ಚಿಂತನೆಗೆ ಹಚ್ಚಿತು. ಶ್ರೇಷ್ಠ ವಿದ್ವಾಂಸರಾದ ಡಾ.ಗೊ.ರು.ಚೆನ್ನಬಸಪ್ಪನವರು ಸಮನ್ವಂiÀÀುಕಾರರಾಗಿ ಗೋಷ್ಠಿಂiÀÀುಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸಮತೂಕದ ಹಾಗೂ ವಿದ್ವತ್ಪೂರ್ಣವಾದ ಉತ್ತರ ನೀಡಿದರು. ಅವರು ತೊಂಬತ್ತೈದರ ಇಳಿ ವಂiÀÀುದಲ್ಲೂ ಉತ್ಸಾಹದ ಚಿಲುಮೆಂiÀÀiÁಗಿ ಮಿಂಚಿದರು. ವೇದಿಕೆಂiÀÀುಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಬರಹಗಾರ್ತಿಂiÀÀುರು ಕೆಳಿದ ಎಲ್ಲ ಪ್ರಶ್ನೆಗಳಿಗೆ ವಚನಾಧಾರಿತ ಪರಿಹಾರ ನೀಡಿದರು. ಅವರ ಉತ್ತರಗಳಿಗೆ ಎಲ್ಲ ಪ್ರೇಕ್ಷಕ ವರ್ಗ ಆತ್ಮಾವಲೋಕನ ಮಾಡಿಕೊಳ್ಳುವಂತಾಯಿತು. ವೇದಿಕೆಂiÀÀುಲ್ಲಿ ಎಂ.ಆಂiÀÀiï.ಕುಮಟಗಿ, ಸಂಗನಬಸಪ್ಪ ಸಜ್ಜನ, ಪೆÇ್ರ.ಎಸ್.ಬಿ.ದೊಡಮನಿ, ಎಸ್.ವಾಂiÀÀiï. ಗದಗ ಉಪಸ್ಥಿತರಿದ್ದರು.
ಬಹಿರಂಗ ಅದಿವೇಶನವು ಜಿಲ್ಲಾ ಕದಳಿ ಮಹಿಳಾ ವೇದಿಕೆಂiÀÀು ಅಧ್ಯಕ್ಷರ ಉಪಸ್ಥಿತಿಂiÀÀುಲ್ಲಿ ಜರುಗಿತು. ಜಿಲ್ಲಾ ಕದಳಿ ವೇದಿಕೆಂiÀÀು ಅಧ್ಯಕ್ಷೆಂiÀÀiÁದ ಡಾ.ಉಷಾ ಹಿರೇಮಠ ಅವರು ನಾಲ್ಕು ನಿರ್ಣಂiÀÀುಗಳನ್ನು ಮಂಡಿಸಿದರು. 1) ವಿಧಾನಸೌಧದ ಮುಂದೆ ಅಕ್ಕಮಹಾದೇವಿ ಮೂರ್ತಿ ಸ್ಥಾಪಿಸುವುದು. 2) ತಾಳಗುಪ್ಪಾ-ಮೈಸೂರು ರೇಲ್ವೆಗೆ ‘ಅಕ್ಕ ಎಕ್ಸ್‍ಪ್ರೆಸ್’ ಎಂದು ನಾಮಕರಣ 3) ತರಿಕೆರೆಂiÀÀುಲ್ಲಿನ ಅಕ್ಕ ನಾಗಮ್ಮನ ಸಮಾಧಿಂiÀÀುನ್ನು ಪುನರುಜ್ಜೀವನ ಗೊಳಿಸುವುದು. 4) ಬಡವಾಣೆ ಮತ್ತು ವೃತ್ತಗಳಿಗೆ ಅಕ್ಕಮಹಾದೇವಿ ಹೆಸರನ್ನು ನಾಮಕರಣ ಮಾಡುವುದು.
ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ತೋಂಟದಾಂiÀರ್Àು ಮಠದ ಡಾ.ಸಿದ್ಧರಾಮ ಮಹಾಸ್ವಾಮಿಗಳು ವಹಿಸಿದ್ದರು. ಬಸವಣ್ಣನವರು ಕಾಂiÀÀುಕ ಜೀವಿಗಳನ್ನು ಒಂದುಗೂಡಿಸಿ ವರ್ಗ, ಜಾತಿ, ಲಿಂಗ, ವರ್ಣರಹಿತ ಸಮಾಜವನ್ನು ನಿರ್ಮಿಸಿ ಸರ್ವ ಸಮಾನತೆಂiÀÀು ಸಮಾಜ ಕಟ್ಟಿದರು. ಇಂದಿನ ಹತ್ತು ಹಲವು ಸಮಸ್ಯೆಗಳಿಗೆ ಶರಣರ ವಿಚಾರಗಳು ಪರಿಹಾರ ಒದಗಿಸುತ್ತವೆಂiÀÉುಂದು ಹೇಳಿದರು.
ಇಲಕಲ್ಲದ ಶ್ರೀಗುರು ಮಹಾಂತಸ್ವಾಮಿಗಳು ಬಡತನ, ಅಜ್ಞಾನಗಳಿಗೆಲ್ಲ ಸಮಾಜದಲ್ಲಿ ಬೇರೂರಿರುವ ಮೂಢನಂಬಿಕೆ ಹಾಗೂ ಕಂದಾಚಾರಗಳೇ ಕಾರಣವಾಗಿವೆ. ಅವುಗಳನ್ನು ತೊರೆದರೆ ಸನ್ಮಾರ್ಗ ಪ್ರಾಪ್ತವಾಗುವದೆಂದು ಹೇಳಿದರು.
ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ ಅವರು ಸಮಾರೋಪ ಭಾಷಣ ಮಾಡಿದರು. ಶರಣರು ನುಡಿದಂತೆ ನಡೆದು ತೋರಿಸಿ ಆದರ್ಶಪ್ರಾಂiÀÀುರಾದರು. ಸಮಾಜದಲ್ಲಿನ ಅನೀತಿ, ಅನ್ಯಾಂiÀÀು, ಅನಾಚಾರಗಳನ್ನು ಹಾಗೂ ಅಂಕು-ಡೊಂಕುಗಳನ್ನು ಹೋಗಲಾಡಿಸಲು ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಶರಣರ ವಚನಗಳಲ್ಲಿನ ಸಂದೇಶಗಳನ್ನು ಪಾಲಿಸಬೇಕೆಂದು ಹೇಳಿದರು. ಅದರಲ್ಲೂ ನವ ಶ್ರೀಮಂತ ಸಮಾಜ ನಿರ್ಮಾಣವಾಗಲು ತಾಂiÀÀುಂದಿರು ಪ್ರಮುಖ ಪಾತ್ರವಹಿಸಬೇಕು. ಮಕ್ಕಳು ಎಳೆವಂiÀÀುಸ್ಸಿನವರಿದ್ದಾಗಲೇ ಸಂಸ್ಕಾರ ಪಾಠಗಳನ್ನು ಹೇಳಿಕೊಡಬೇಕೆಂದು ಹೇಳಿದರು. ಸಭೆಂiÀÀುಲ್ಲಿ ಸರ್ವಾಧ್ಯಕ್ಷೆಂiÀÀುರಾದ ಶ್ರೀಮತಿ ಶಶಿಕಲಾ ವಸ್ತ್ರದ, ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣಿ, ಮಲ್ಲಿಕಾರ್ಜುನ ರೋಡಗಿ, ಮ.ಗು.ಂiÀÀiÁದವಾಡ, ಗುರುಪಾದಂiÀÀ್ಯು ಗಚ್ಚಿನಮಠ, ಜಂಬುನಾಥ ಕಂಚ್ಯಾಣಿ ಮುಂತಾದವರು ಉಪಸ್ಥಿತರಿದ್ದರು. ವೇದಿಕೆಂiÀÀುಲ್ಲಿ ವೈವಿದ್ಯಮಂiÀÀು ಮನರಂಜನಾ ಕಾಂiÀರ್Àುಕ್ರಮಗಳು ಜರುಗಿದವು.
ಸಮಾವೇಶದ ಕಾಂiÀÀiರ್Áಧ್ಯಕ್ಷರಾದ ವಿ.ಸಿ. ನಾಗಠಾಣರು ಕಾಂiÀರ್Àುಕ್ರಮದ ಂiÀÀುಶಸ್ಸಿಗೆ ತನು, ಮನ, ಧನದಿಂದ ಸೇವೆ ಸಲ್ಲಿಸಿದ ದಾನಿಗಳನ್ನು, ರಾಜಕೀಂiÀÀು ಧುರೀಣರನ್ನು, ವ್ಯಾಪಾರಸ್ಥರನ್ನು, ಬ್ಯಾಂಕುಗಳ ಅಧ್ಯಕ್ಷರನ್ನು, ಭಾರತ ಸೇವಾ ದಳದ ಸಿಬ್ಬಂದಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಪೆÇ್ರ.ಸುಭಾಸ ಕನ್ನೂರ, ಪೆÇ್ರ.ದೀಪಾ ಲಗಳಿ, ರಾಜಶೇಖರ ಉಪರಾಣಿ, ಶ್ರೀಮತಿ ವನಶ್ರೀ ಹತ್ತಿ, ಡಾ.ವಿ.ಡಿ.ಐಹೊಳ್ಳಿ ಸ್ವಾಗತಿಸಿ, ವಂದಿಸಿ, ನಿರ್ವಹಣೆ ಮಾಡಿದರು.