ʻಸ್ವಚ್ಛತೆಯ ವಿಚಾರದಲ್ಲಿ ಸದ್ಯ ಮಂಗಳೂರು ಸ್ಥಿತಿ ಹದಗೆಟ್ಟಿದೆʼ

ಮಂಗಳೂರು, ಜ.೯- ಕಳೆದ ಕೆಲವು ವರ್ಷಗಳಿಂದ ನಗರದಲ್ಲಿ ಸ್ವಚ್ಛ ಭಾರತ್ ಮಿಷನ್ ನಿಷ್ಕ್ರಿಯವಾಗಿದೆ. ಸ್ವಚ್ಛತೆಯ ವಿಚಾರದಲ್ಲಿ ಪ್ರಸ್ತುತ ಮಂಗಳೂರಿನ ಪರಿಸ್ಥಿತಿ ಹದಗೆಟ್ಟಿದೆ ಎಂದು ಮಾಜಿ ಶಾಸಕ ಜೆ ಆರ್ ಲೋಬೊ ಆರೋಪಿಸಿದ್ದಾರೆ.

ಜನವರಿ 8 ಶುಕ್ರವಾರದಂದು ಇಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಜೆ ಆರ್ ಲೋಬೊ ಅವರು, ”ಮಂಗಳೂರು ಒಂದು ಕಾಲದಲ್ಲಿ ಸ್ವಚ್ಛತೆಗೆ ಹೆಸರುವಾಸಿಯಾಗಿತ್ತು. ಸ್ವಚ್ಛತೆ ವಿಚಾರದಲ್ಲಿ ಈ ಹಿಂದೆ ಮಂಗಳೂರಿಗೆ ಹಲವಾರು ಪ್ರಶಸ್ತಿಗಳನ್ನು ನೀಡಲಾಗಿತ್ತು. ಆದರೆ ಸ್ವಚ್ಛತೆಯ ವಿಚಾರದಲ್ಲಿ ಪ್ರಸ್ತುತ ಮಂಗಳೂರಿನ ಪರಿಸ್ಥಿತಿ ಹದಗೆಟ್ಟಿದೆ. ನಗರದ ಮೂಲೆ ಮೂಲೆಯಲ್ಲಿ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಸರಿಯಾದ ತ್ಯಾಜ್ಯ ವಿಲೇವಾರಿ ವಿಧಾನವನ್ನು ಜಾರಿಗೆ ತರುತ್ತಿಲ್ಲ. ತ್ಯಾಜ್ಯವನ್ನು ನಿಯಮಿತವಾಗಿ ಸಂಗ್ರಹಿಸುತ್ತಿಲ್ಲ ಎಂಬುದನ್ನು ನಾವು ಗಮನಿಸಬಹುದಾಗಿದೆ. ಈ ಹಿಂದೆ ಸ್ವಚ್ಛತೆಯಲ್ಲಿ ಮಂಗಳೂರು ಮುಂಚೂಣಿಯಲ್ಲಿತ್ತು, ಆದರೆ ಈಗ ಇಲ್ಲ. ತ್ಯಾಜ್ಯ ಸಂಗ್ರಹಕಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಸಡ್ಡೆ ತ್ಯಾಜ್ಯ ವಿಲೇವಾರಿ ವಿಧಾನಗಳ ನಡುವೆಯೇ ಬೀದಿ ನಾಯಿಗಳು ಕೂಡಾ ತ್ಯಾಜ್ಯ ವಿಲೇವಾರಿಯ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸಿದೆ. ಈ ರೀತಿಯ ಕೆಟ್ಟ ಪರಿಸ್ಥಿತಿಯನ್ನು ನಾವು ಈ ಹಿಂದೆ ನೋಡಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಕೆಲವು ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಲಾಗಿತ್ತು. ಆದರೆ ಈ ರೀತಿಯ ಕೆಟ್ಟ ಪರಿಸ್ಥಿತಿ ಎಂದಿಗೂ ಬಂದಿಲ್ಲ. ಮಂಗಳೂರು ನಗರ ಪಾಲಿಕೆಯು (ಎಂಸಿಸಿ) ಹಣವಿಲ್ಲ ಎಂದು ಹೇಳುತ್ತದೆ. ನಗರದಲ್ಲಿ ಒಂದಕ್ಕಿಂತ ಹೆಚ್ಚು ಲಕ್ಷ ಕುಟುಂಬಗಳಿವೆ. ಸರಾಸರಿ 5 ಕೋಟಿ ರೂ.ಗಳ ತೆರಿಗೆ ಸಂಗ್ರಹ ಮಾಡಬೇಕಾಗಿದೆ. ಮಾಡಿಲ್ಲವೆಂದರೆ ಅದು ಆಡಳಿತದ ವೈಫಲ್ಯ. ಕಾರ್ಪೋರೇಟರ್ ಶಶಿಧರ್ ಹೆಗ್ಡೆ, ಎಂಸಿಸಿ ವಿರೋಧ ಪಕ್ಷದ ನಾಯಕ ಅಬ್ದುಲ್ ರಾವೂಫ್‌ ಮತ್ತು ಇತರರು ಉಪಸ್ಥಿತರಿದ್ದರು.

Spread the love