ʻಬ್ಯಾರಿ ಭವನ ಶಿಲಾನ್ಯಾಸ ಕಾರ್ಯಕ್ರಮ ಮುಂದೂಡಲು ನಿಜವಾದ ಕಾರಣ ತಿಳಿಸಿʼ

ಮಂಗಳೂರು, ಡಿ.೩೧- ಉಳ್ಳಾಲದ ತೊಕ್ಕೊಟ್ಟು ಬಳಿ ನಿರ್ಮಿಸಲು ಹಮ್ಮಿಕೊಂಡ ಬ್ಯಾರಿ ಭವನ ಶಿಲಾನ್ಯಾಸ ಕಾರ್ಯಕ್ರಮ ವನ್ನು ಏಕಾಏಕಿ ಮುಂದೂಡಲು ಕಾರಣವೇನು ಎನ್ನುವುದನ್ನು ಜನತೆಗೆ ಸ್ಪಷ್ಟ ಪಡಿಸಬೇಕಾಗಿದೆ. ಬ್ಯಾರಿ ಭವನದ ನಿರ್ಮಾಣದ ವಿಚಾರದಲ್ಲಿ ಸರಕಾರ ತನ್ನ ಫ್ಯಾಸಿಸ್ಟ್ ಧೋರಣೆಯನ್ನು ಕೈ ಬಿಡಬೇಕು ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದ್ದಾರೆ.

ಉಳ್ಳಾಲದ ಯಾವುದೇ ಘಟನೆಗಳಿಗೂ ನನ್ನನ್ನು ತಳುಕು ಹಾಕುವ ಕೆಲಸ ನಡೆಯುತ್ತಿದೆ. ಬ್ಯಾರಿ ಭವನ ನಿರ್ಮಾಣದ ವಿಚಾರ ದಲ್ಲಿ ಗೊಂದಲ ಏಕೆ ನಿರ್ಮಾಣ ವಾಯಿತು. ಈ ಹಿಂದೆ ಬ್ಯಾರಿ ಅಕಾಡೆಮಿಯ ಭವನ ನಿರ್ಮಾಣಕ್ಕೆ ಮತ್ತು ಅಬ್ಬಕ್ಕ ಭವನ ನಿರ್ಮಾಣ ಕ್ಕೆ ಪ್ರತ್ಯೇಕ ವಾಗಿ ಸ್ಥಳ ನಿಗದಿಪಡಿ ಸಲಾಗಿತ್ತು. ಬಳಿಕ ಏಕೆ ಬದಲಾವಣೆ ಮಾಡಲಾಯಿತು. ಶಿಲಾನ್ಯಾಸ ಕಾರ್ಯಕ್ರಮ ಏಕೆ ಬದಲಾವಣೆಯಾಗಿದೆ ನಿಜವಾದ ಕಾರಣ ಏನು ಎಂದು ಸರ್ಕಾರದ ಸ್ಪಷ್ಟ ಪಡಿಸ ಬೇಕಾಗಿದೆ. ತೊಕ್ಕೊಟ್ಟು ಬಸ್ ನಿಲ್ದಾಣದ ಸಮೀಪದ ಕಂದಾಯ ಇಲಾಖೆ ಗೆ ನಿಗದಿ ಪಡಿಸಲಾದ ಸ್ಥಳದಲ್ಲಿ ಬ್ಯಾರಿಭವನ ನಿರ್ಮಾಣಕ್ಕೆ ಇಲಾಖೆಯಿಂದಲೇ ಅನುಮತಿ ದೊರೆತಿರಲಿಲ್ಲ. ಈ ಹಿಂದೆ ಬೈತುರ್ಲಿಯಲ್ಲಿ ನಿಗದಿಯಾಗಿದ್ದ ಬ್ಯಾರಿ ಭವನ ನಿರ್ಮಾಣಕ್ಕೆ ಯಾರು ವಿರೋಧ ವ್ಯಕ್ತಪಡಿಸಿದ್ದಾರೆ? ಈ ಎಲ್ಲಾ ವಿಚಾರಗಳು ಬೆಳಕಿಗೆ ಬರಬೇಕಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಧಿಕಾರಿ ಜೊತೆ ಸಮಾಲೋಚನೆ ನಡೆಸುವುದಾಗಿ ಯು.ಟಿ.ಖಾದರ್ ತಿಳಿಸಿದ್ದಾರೆ. ಅಬ್ಬಕ್ಕ ಭವನದ ವಿಚಾರದಲ್ಲಿ ಗೊಂದಲವಿಲ್ಲ. ಈ ಹಿಂದೆ ಡಿ.ವಿ.ಸದಾನಂದ ಗೌಡರವರು ಮುಖ್ಯ ಮಂತ್ರಿಯಾಗಿದ್ದಾಗಲೇ ಅಬ್ಬಕ್ಕ ಭವನಕ್ಕೆ ಒಂದು ಕೋಟಿ ಅನುದಾನ ನಿಗದಿ ಪಡಿಸಲಾಗಿತ್ತು. ಬಳಿಕ ಸಿದ್ದರಾಮಯ್ಯ ರಾಜ್ಯದ ಮುಖ್ಯ ಮಂತ್ರಿಯಾದ ಬಳಿಕ ಈ ಯೋಜನೆಯನ್ನು ಪರಿಷ್ಕರಿಸಿ 8 ಕೋಟಿ ರೂ ಗಳಿಗೆ ನಿಗದಿಪಡಿಸಿ ಅನುಮೋದನೆ ನೀಡಲಾಗಿತ್ತು. ‌ಆದುದರಿಂದ ಅಬ್ಬಕ್ಕ ಭವನ ನಿರ್ಮಾಣದ ಬಗ್ಗೆ ಗೊಂದಲವಿಲ್ಲ. ಗೊಂದಲಗಳಿದ್ದರೆ ಈ ಬಗ್ಗೆ ಅಧಿಕಾರಿಗಳು ಅದನ್ನು ನಿವಾರಿಸಬೇಕಾಗಿದೆ ಎಂದು ಶಾಸಕ ಯು.ಟಿ. ಖಾದರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಿಧಾನ ಪರಿಷತ್ತಿನ ಉಪಸಭಾಪತಿ ಧರ್ಮೇ ಗೌಡ ವಿಧಾನ ಪರಿಷತ್ ನ ಅಹಿತಕರ ಘಟನೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರೆ ಅದಕ್ಕೆ ಅವರನ್ನು ಸಭಾಧ್ಯಕ್ಷರ ಪೀಠದಲ್ಲಿ ಕೂರಿಸಿದವರು ಕಾರಣರಾಗುತ್ತಾರೆ. ಆ ರೀತಿ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಸರಕಾರ ಜನರನ್ನು ಗೊಂದಕ್ಕೀಡು ಮಾಡುವ ತೀರ್ಮಾನ ಗಳನ್ನು ತೆಗೆದುಕೊಳ್ತಾ ಇದೆ.ರಾಜ್ಯದ ಲ್ಲಿಯೇ ವಿವಿಧ ಕಡೆ ವಿಭಿನ್ನ ನೀತಿ ಜಾರಿ ಮಾಡಲು ಹೊರಟಿರುವುದು ಜನರನ್ನು ಗೊಂದಲಕ್ಕೀಡು ಮಾಡಿದೆ ಎಂದು ಯು.ಟಿ.ಖಾದರ್ ಟೀಕಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ರಾದ ಮುಹಮ್ಮದ್ ಮೋನು, ಕಾಂಗ್ರೆಸ್ ಮುಖಂಡರಾದ ಈಶ್ವರ ಉಳ್ಳಾಲ್, ಎನ್.ಎಸ್. ಕರೀಂ, ಜಬ್ಬಾರ್,ದೇವಕಿ ಮೊದಲಾದ ವರು ಉಪಸ್ಥಿತರಿದ್ದರು.