ʻಡಯಾಬಿಟಿಕ್‌ ಡೇ ವಾಕಥಾನ್‌-೨೦೨೨ʼ 

ಮಂಗಳೂರು, ನ.1೪- ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ ವತಿಯಿಂದ ವಿಶ್ವ ಡಯಾಬಿಟೀಸ್ ದಿನ ಅಂಗವಾಗಿ ವಾಕಥಾನ್- 2022 ಕಾರ್ಯಕ್ರಮವು ನಗರದ ಪಂಪ್‌ವೆಲ್‌ನಲ್ಲಿರುವ ನಿಟ್ಟೆ ಡೇ ಕೇರ್ ಸೆಂಟರ್‌ನಲ್ಲಿ ರವಿವಾರ ನಡೆಯಿತು. 

ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಅಪರಾಧ ವಿಭಾಗದ ಡಿಸಿಪಿ ದಿನೇಶ್, ಎಸಿಪಿಗಳಾದ ಪಿ.ಎ.ಹೆಗಡೆ, ಗೀತಾ ಕುಲಕರ್ಣಿ, ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ.ಎಂ.ಶಾಂತರಾಮ ಶೆಟ್ಟಿ, ಉಪಕುಲಪತಿ ಡಾ.ಸತೀಶ್  ಕುಮಾರ್  ಭಂಡಾರಿ ವಾಕಥಾನ್‌ಗೆ  ಚಾಲನೆ ನೀಡಿದರು. ಕ್ಷೇಮ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಸುಧೀಂದ್ರ, ಮೂಳೆಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿಕ್ರಮ್ ಶೆಟ್ಟಿ, ಎಂಡೋಕ್ರೊನಾಲಜಿ ವಿಭಾಗದ ತಜ್ಞ ಡಾ.ಶ್ರೀಕೃಷ್ಣ ವಿ.ಆಚಾರ್ಯ ಉಪಸ್ಥಿತರಿದ್ದರು.  ನಿಟ್ಟೆ ಡೇ ಕೇರ್ ಸೆಂಟರ್‌ನಿಂದ ಆರಂಭಗೊಂಡ ವಾಕಥಾನ್, ಕಂಕನಾಡಿಯ ಕರಾವಳಿ ವೃತ್ತ, ಬೆಂದೂರ್‌ವೆಲ್, ಕಲೆಕ್ಟರ್ಸ್ ಗೇಟ್, ಎಸ್‌ಸಿಎಸ್ ಆಸ್ಪತ್ರೆ, ಅಪ್ಪರ್ ಬೆಂದೂರ್‌ವೆಲ್, ಕುಲಾಸೊ, ಕಂಕನಾಡಿ, ಪಂಪ್‌ವೆಲ್ ಮೂಲಕ ನಿಟ್ಟೆ ಡೇ ಕೇರ್ ಸೆಂಟರ್‌ಗೆ ತಲುಪಿತು. ಅತಿಥಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡೇ ಕೇರ್ ಸೆಂಟರ್‌ನಲ್ಲಿ ಡಯಾಬಿಟಿಕ್ ಫ್ರೆಂಡ್ಲಿ ಫುಡ್ ಎಕ್ಸಿಬಿಷನ್ ಏರ್ಪಡಿಸಲಾಗಿತ್ತು.